ಕೃಷಿ ಈ ದೇಶದ ಜೀವಾಳ: ಕೃಷಿ-ಖುಷಿ ಕಾಯ೯ಕ್ರಮದಲ್ಲಿ ಶಾಸಕ ಕೋಟ್ಯಾನ್ ಹೇಳಿಕೆ

ಕೃಷಿ ಈ ದೇಶದ ಜೀವಾಳ: ಕೃಷಿ-ಖುಷಿ ಕಾಯ೯ಕ್ರಮದಲ್ಲಿ ಶಾಸಕ ಕೋಟ್ಯಾನ್ ಹೇಳಿಕೆ


ಮೂಡುಬಿದಿರೆ: ಕೃಷಿ ನಮ್ಮ ಜೀವನದ ಅವಿಭಾಜ್ಯ ಅಂಗ ಮತ್ತು ಈ ದೇಶದ ಜೀವಾಳ. ಕೃಷಿಯಲ್ಲಿರುವ ಅಪಾರ ಕೆಲಸಗಳ ಸಾಧ್ಯತೆಗಳನ್ನು ಯುವ ಜನರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕ್ಷೇತ್ರದ ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು. 


ಅವರು ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿ, ಕೃಷಿ ವಿಚಾರ ವಿನಿಮಯ ಕೇಂದ್ರ, ವಲಯ ಅರಣ್ಯ ಇಲಾಖೆ ಇವುಗಳ ಸಹಭಾಗಿತ್ವದಲ್ಲಿ ಎಂಸಿಎಸ್ ಸೊಸೈಟಿ ಕಲ್ಪವೃಕ್ಷ ಸಭಾಂಗಣದಲ್ಲಿ ಶನಿವಾರ ನಡೆದ ಕೃಷಿ ಖುಷಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.


ಸೊಸೈಟಿ ಅಧ್ಯಕ್ಷ ಎಂ ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.


ಮುಖ್ಯ ಅತಿಥಿಗಾಗಿ ಸೊಸೈಟಿ ನಿರ್ದೇಶಕರಾದ ಮಾಜಿ ಸಚಿವ ಕೆ. ಅಭಯಚಂದ್ರ ಮತ್ತು ಅನಿತಾ ಪಿ. ಶೆಟ್ಟಿ ಭಾಗವಹಿಸಿದ್ದರು.


ಆಳ್ವಾಸ್ ಕೃಷಿ ವಿಜ್ಞಾನ ಕಾಲೇಜಿನ ಡೀನ್ ವಾಸುದೇವ ಎನ್.ಎಸ್. ಅವರು ಕೃಷಿ-ಖುಷಿ: ಪ್ರಕೃತಿ ಕೃಷಿ ವಿಸ್ಮಯ ಮತ್ತು ನಿವೃತ್ತ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಸುರತ್ಕಲ್ ಅವರು ಕೃಷಿ- ಯುವ ಜನತೆ - ಆಧುನಿಕತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಮ್ಮಾನ:

ಪಾಸ್ಕಲ್ ಪಿಂಟೋ ತಾಕೊಡೆ (ಹಲವು ಬಗೆಯ ಹಣ್ಣಿನ ಕೃಷಿ), ನವೀನ್ ಚಂದ್ರ ಅಂಬೂರಿ (ಅಧ್ಯಾಪನ ಮತ್ತು ಕೃಷಿ) ಮುಳಿಬೆಟ್ಟು ತೇಜಸ್ ಶೆಟ್ಟಿ (ಹೂ, ಹಣ್ಣು ಕೃಷಿ), ಕುಮಾರ (ಹೊರ ಜಿಲ್ಲೆಯಿಂದ ಒಂದು 32 ವರ್ಷಗಳಿಂದ ಮೂಡುಬಿದಿರೆಯಲ್ಲಿ ಹಮಾಲಿಯಾಗಿ 120 ಕೆಜಿ ಹೊರಬಲ್ಲವರು) ಇವರನ್ನು ಹಾಗೂ ಸಂಘಟನೆಗಳಾದ ಮಾರ್ಪಾಡಿ ರೈತ ಸಂಘ ಮತ್ತು ಕೃಷಿ ವಿಚಾರ ವಿನಿಮಯ ಕೇಂದ್ರ ಮೂಡುಬಿದಿರೆ ಇವುಗಳನ್ನು ಸಮ್ಮಾನಿಸಲಾಯಿತು.

ರಸಪ್ರಶ್ನೆ:

ವಲಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನವೀನ್ ಚಂದ್ರಅಂಬೂರಿ ಮತ್ತು ಚೇತನಾ ಆರ್ ಹೆಗ್ಡೆ ಕೃಷಿ ವಿಚಾರ ಕುರಿತು ರಸಪ್ರಶ್ನೆ ನಡೆಸಿಕೊಟ್ಟರು.

 ಪತ್ರಕತ೯ ಧನಂಜಯ ಮೂಡುಬಿದಿರೆ ಅವರು ಡಾ. ಅರವಿಂದ ಮಾಲಗತ್ತಿ ಅವರ  "ಮಳೆ ಬಂದಿತಣ್ಣಾ" ಕವನ ಹಾಡಿದರು.

ಕೃ.ವಿ.ವಿನಿಮಯ ಕೇಂದ್ರದ ಅಧ್ಯಕ್ಷ ಅಭಯ ಕುಮಾರ್ ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸ್ವಾಗತಿಸಿದರು. ಚೇತನಾ ಆರ್. ಹೆಗ್ಡೆ, ನವೀನ್ ಅಂಬೂರಿ ನಿರೂಪಿಸಿದರು.ಗುಣಪಾಲ ಮುದ್ಯ ವಂದಿಸಿದರು.  

ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article