ಪ್ರಿಯದಶಿ೯ನಿ ಸೊಸೈಟಿ ಯಿಂದ ಜನಸ್ನೇಹಿ ಸೇವೆ: ಕೆ. ಅಭಯಚಂದ್ರ

ಪ್ರಿಯದಶಿ೯ನಿ ಸೊಸೈಟಿ ಯಿಂದ ಜನಸ್ನೇಹಿ ಸೇವೆ: ಕೆ. ಅಭಯಚಂದ್ರ

ಶೀಘ್ರದಲ್ಲಿಯೇ 5ನೇ ಶಾಖೆ ಉಡುಪಿಯಲ್ಲಿ ಆರಂಭ


ಮೂಡುಬಿದಿರೆ: ಜನಸ್ನೇಹಿ ಸೇವೆಯನ್ನು ನೀಡುವ ಮೂಲಕ ಅಲ್ಪಾವಧಿಯಲ್ಲೆ ಪ್ರಗತಿಯನ್ನು ಸಾಧಿಸಿದ ಪ್ರಿಯದರ್ಶಿನಿ ಸೊಸೈಟಿ ಸಾಮಾಜಿಕ ಸೇವೆಗಳಲ್ಲು ತೊಡಗಿಸಿಕೊಂಡಿರುವುದು ಶ್ಲಾಘನಾರ್ಹ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹೇಳಿದರು.


ಅವರು ಕೊಡಂಗಲ್ಲು ರಾಣೆಯಾರ್ ಸಭಾಭವನದಲ್ಲಿ ಭಾನುವಾರ ನಡೆದ ಪ್ರಿಯದರ್ಶಿನಿ ಕೊ-ಆಪರೇಟಿವ್ ಸೊಸೈಟಿ ಹಳೆಯಂಗಡಿ ಇದರ ಮೂಡುಬಿದಿರೆ ಶಾಖೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗು ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏಪ೯ಡಿಸಿದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ಜನರು  ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದರು.

ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾಡು ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಿಯದರ್ಶಿನಿ ಕೊ-ಆಪರೇಟಿವ್ ಸೊಸೈಟಿ ತನ್ನ ಲಾಭಾಂಶದಲ್ಲಿ ಜನಪರ ಸೇವೆಯನ್ನು ಮಾಡುತ್ತಾ ಬಂದಿದೆ. ಮೂಡುಬಿದಿರೆ ಶಾಖೆಯು ಉತ್ತಮ ಅಭಿವೃದ್ಧಿಯನ್ನು ಕಾಣುತ್ತಿದ್ದು ಸೊಸೈಟಿಯ 5ನೇ ಶಾಖೆ ಶೀಘ್ರದಲ್ಲಿ ಉಡುಪಿಯಲ್ಲಿ ಆರಂಭವಾಗಲಿದೆ ಎಂದರು. 

ರೋಟರಿ ಕ್ಲಬ್ ಅಧ್ಯಕ್ಷ ಡಾ.ಆಶೀರ್ವಾದ್, ದೇವಾಡಿಗರ ಸುಧಾರಕರ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ, ಪುರಸಭೆ ಮಾಜಿ ಸದಸ್ಯರಾದ ಕೊರಗಪ್ಪ, ರೂಪಾ ಸಂತೋಷ್ ಶೆಟ್ಟಿ, ಯುವ ವಾಹಿನಿ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಹೀಲಿಂಗ್  ಹ್ಯಾಂಡ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಜ್ವಲ್ ಕುಲಾಲ್, ರಾಣಿಯಾರ್ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಕೆ.ಎಸ್, ರೈತ ಸಂಘ ಮಾರ್ಪಾಡಿ ಘಟಕದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು. 

ಸೊಸೈಟಿ ಮೆನೇಜರ್ ಅಭಿಷ್ಠಾ ಜೈನ್ ನಿರೂಪಿಸಿದರು. ಸಿಇಒ ಸುದರ್ಶನ್ ವಂದಿಸಿದರು. 

ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆ ಕಟೀಲು ಇದರ ಆಡಳಿತ ನಿರ್ದೇಶಕ ಡಾ.ಶಿವಾನಂದ ಪ್ರಭು ನೇತ್ರತ್ವದ ತಂಡ ಆರೋಗ್ಯ ಶಿಬಿರವನ್ನು ನಡೆಸಿಕೊಟ್ಟಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article