ಖಾಸಗಿ ಕಂಪನಿಯ ಅಧಿಕಾರಿ ಮೂಡುಬಿದಿರೆಯ ಚೇತನ್ ಪಾಂಡು ಸುವಣ೯ ನಿಧನ
Wednesday, August 19, 2026
ಮೂಡುಬಿದಿರೆ: ಬೆಂಗಳೂರಿನಲ್ಲಿ ಖಾಸಗಿ ಕಂಪೆನಿ ಅಧಿಕಾರಿ, ಮೂಡುಬಿದಿರೆ ಗಾಂಧಿನಗರ ಮೂಲದ ಚೇತನ್ ಪಾಂಡು ಸುವರ್ಣ (47) ಅವರು ಮಂಗಳವಾರ ನಿಧನರಾಗಿದ್ದಾರೆ.
ಯಕೃತ್ ಸಮಸ್ಯೆ ಸಮಸ್ಯೆಯಿಂದ ಬಳಳುತಿದ್ದ ಅವರಿಗೆ ಆಗಸ್ಟ್ 17ರಂದು ಶಸ್ತ್ರಚಿಕಿತ್ಸೆ ನಡೆದಿದ್ದು, ಆಗಸ್ಟ್ 18ರಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅಂತ್ಯಕ್ರಿಯೆ ಆಗಸ್ಟ್ 19ರಂದು ಮೂಡುಬಿದಿರೆಯ ಮನೆಯಲ್ಲಿ ನಡೆಯಲಿದೆ.
ಚೇತನ್ ಅವರು ತಾಯಿ, ಪತ್ನಿ, ಪುತ್ರಿ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅವರನ್ನು ಅಗಲಿದ್ದಾರೆ.