ಟ್ರಾಫಿಕ್ ಸಹಿತ ಸಾವ೯ಜನಿಕ ಸಮಸ್ಯೆ ಬಗೆಹರಿಸಲು 'ನಮ್ಮ ಮೂಡುಬಿದಿರೆ ಫೋರಂ’ ನಿಂದ ತಹಶೀಲ್ದಾರ್ ಗೆ ಮನವಿ

ಟ್ರಾಫಿಕ್ ಸಹಿತ ಸಾವ೯ಜನಿಕ ಸಮಸ್ಯೆ ಬಗೆಹರಿಸಲು 'ನಮ್ಮ ಮೂಡುಬಿದಿರೆ ಫೋರಂ’ ನಿಂದ ತಹಶೀಲ್ದಾರ್ ಗೆ ಮನವಿ


ಮೂಡುಬಿದಿರೆ: ಕಳೆದ ಕೆಲವು ಸಮಯಗಳಿಂದ ಮೂಡುಬಿದಿರೆ ವ್ಯಾಪ್ತಿಯಲ್ಲಿ ಸಾವ೯ಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ‘ನಮ್ಮ ಮೂಡುಬಿದಿರೆ ಫೋರಂ’ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಯವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಕಳೆದ ಹಲವು ವರ್ಷಗಳಿಂದ ಫೋರಂ ವತಿಯಿಂದ ಸಾರ್ವಜನಿಕ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ನಿರಂತರವಾಗಿ ತರಲಾಗುತ್ತಿದೆ. ಮನವಿಗಳು, ಸಭೆಗಳು, ದೂರವಾಣಿ ಸಂಪರ್ಕ ಹಾಗೂ ಫೋಟೋ ಮತ್ತು ವೀಡಿಯೋ ಸಾಕ್ಷ್ಯಗಳ ಮೂಲಕ ಸಮಸ್ಯೆಗಳನ್ನು ತಿಳಿಸಲಾಗಿದ್ದು, ಒಟ್ಟು 32 ಪ್ರಮುಖ ಸಾರ್ವಜನಿಕ ಸಮಸ್ಯೆಗಳನ್ನು ಗುರುತಿಸಿ, ಸಾಧ್ಯವಾದ ಪರಿಹಾರಗಳೊಂದಿಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.

ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಡೆದ ಚರ್ಚೆಯ ಬಳಿಕ 6 ಪ್ರಮುಖ ಸಮಸ್ಯೆಗಳಿಗೆ 10 ದಿನಗಳೊಳಗೆ ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳು, ತಹಸೀಲ್ದಾರ್ ಹಾಗೂ ಮೂಡುಬಿದಿರೆ ಸಲಹಾ ಸಮಿತಿಯನ್ನು ಒಳಗೊಂಡ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಹಲವು ಸಮಸ್ಯೆಗಳು ಇನ್ನೂ ಬಗೆಹರಿಯದೆ ಉಳಿದಿವೆ ಎಂದು ಫೋರಂ ತಿಳಿಸಿದೆ. 

ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿಂದ ಸಮಸ್ಯೆಗಳ ಜವಾಬ್ದಾರಿಯನ್ನು ಪರಸ್ಪರ ಇಲಾಖೆಗಳ ಮೇಲೆ ಹಾಕಲಾಗುತ್ತಿದೆ. ಆದ್ದರಿಂದ ಎಲ್ಲಾ ಇಲಾಖೆಗಳು ಒಂದೇ ವೇದಿಕೆಯಲ್ಲಿ ಕುಳಿತು ನೆಲಮಟ್ಟದ ಸಮಸ್ಯೆಗಳನ್ನು ಪರಿಶೀಲಿಸಿ, ಜವಾಬ್ದಾರಿ ನಿಗದಿಪಡಿಸಿ, ಸ್ಪಷ್ಟ ಹಾಗೂ ಕಾರ್ಯಸಾಧ್ಯವಾದ ಪರಿಹಾರಗಳನ್ನು ನೀಡಬೇಕು ಎಂದು ಫೋರಂ ಆಗ್ರಹಿಸಿದೆ.

ಸಮಸ್ಯೆಗಳ ಪರಿಹಾರಕ್ಕಾಗಿ ಆ.27ರಂದು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಜೊತೆ ಜಂಟಿ ಸಭೆ ನಡೆಸಲಾಗುವುದು ಎಂದು ತಹಸೀಲ್ದಾರ್ ಶ್ರೀಧರ್ ಮುಂದಲಮನಿ ಅವರು ತಿಳಿಸಿದರು.

ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ನಮ್ಮ ಮೂಡುಬಿದಿರೆ ಫಾರಂನ ಅಕ್ಷಯ್ ಜೈನ್, ನೋ-ಎಂಟ್ರಿ ಬೋರ್ಡ್‌ಗಳು, ಡೈರೆಕ್ಷನ್ ಬೋರ್ಡ್‌ಗಳು, ಬ್ಯಾರಿಕೇಡ್‌ಗಳು, ರೋಡ್ ಮಿರರ್‌ಗಳು ಸೇರಿದಂತೆ ಅಗತ್ಯ ಸಂಚಾರ ಸೌಲಭ್ಯಗಳಿಗೆ ಸಾರ್ವಜನಿಕರು ಹಾಗೂ ಮೂಡುಬಿದಿರೆ ಸಲಹಾ ಸಮಿತಿ ಸಹಕಾರ ನೀಡಲು ಸಿದ್ಧವಿದೆ ಎಂದು ಫೋರಂ ತಿಳಿಸಿದೆ.

ಆಗಸ್ಟ್ 31ರಂದು ಬೆಳಿಗ್ಗೆ 10.30ರಿಂದ 11.30ರವರೆಗೆ ಪಟ್ಟಣ ಬಂದ್ ನಡೆಸಿ, ನಿಶ್ಮಿತಾ ಸರ್ಕಲ್ ಬಳಿ ಶಾಂತಿಯುತ ಮೌನ ಪ್ರತಿಭಟನೆ ನಡೆಸಲು ಫೋರಂ ನಿರ್ಧರಿಸಿದೆ. ಯಾವುದೇ ರಾಜಕೀಯ ಬೆಂಬಲ ಅಥವಾ ಪ್ರಭಾವವಿಲ್ಲದೆ ಪ್ರತಿಭಟನೆ ನಡೆಸಲಾಗುವುದು. ಆಗಸ್ಟ್ 31ಕ್ಕೂ ಮುನ್ನ ಸಂಬಂಧಪಟ್ಟ ಇಲಾಖೆಗಳು ಜಂಟಿ ಸಾರ್ವಜನಿಕ ಸಭೆ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಹಾಗೂ ಸ್ಪಷ್ಟ ಕಾರ್ಯಯೋಜನೆ ನೀಡಿದರೆ ಫೋರಂ ಮತ್ತು ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಲು ಸಿದ್ಧರಾಗಿದ್ದಾರೆ ಎಂದು ತಿಳಿಸಿದೆ.

“ಯಾವುದೇ ಇಲಾಖೆ ಅಥವಾ ವ್ಯಕ್ತಿಯ ವಿರುದ್ಧ ನಮ್ಮ ಹೋರಾಟವಲ್ಲ. ಜವಾಬ್ದಾರಿ, ಸಮನ್ವಯ ಮತ್ತು ಕಾರ್ಯರೂಪದ ಪರಿಹಾರ ಬೇಕಾಗಿದೆ. ಎಲ್ಲ ಇಲಾಖೆಗಳು ಒಟ್ಟಾಗಿ ಕುಳಿತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು” ಎಂದು ಫೋರಂ ತಿಳಿಸಿದರು.

‘ನಮ್ಮ ಮೂಡುಬಿದಿರೆ ಫೋರಂ’ನ ಅಕ್ಷಯ್ ಕೆ. ಜೈನ್, ಯಾಸೀರ್, ದಿನೇಶ್ ಶೆಣೈ, ಕೌಸ್ತುಬ್ ಜೈನ್, ಅಡ್ವೊಕೇಟ್ ಇರ್ಷಾದ್, ಪ್ರಕಾಶ್ ಸಪಳಿಗ ಹಾಗೂ ಮಧುಸೂಧನ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article