ಸಚಿವ ಸ್ಥಾನಕ್ಕೆ ಒತ್ತಡ ಸಲ್ಲ: ಅಭಯಚಂದ್ರ ಜೈನ್

ಸಚಿವ ಸ್ಥಾನಕ್ಕೆ ಒತ್ತಡ ಸಲ್ಲ: ಅಭಯಚಂದ್ರ ಜೈನ್


ಮೂಡುಬಿದಿರೆ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದಲ್ಲಿ ಸಚಿವ ಸ್ಥಾನದಿಂದ ವಂಚಿತರಾದವರು ಸಚಿವ ಸ್ಥಾನ ನೀಡಲು ಒತ್ತಡ ಹೇರುವುದು, ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು.

ಈಗಾಗಲೇ ಸಚಿವ ಸ್ಥಾನವನ್ನು ನಿರ್ವಹಿಸಿದ ಹಿರಿಯ ಶಾಸಕರು ಯುವ ಶಾಸಕರಿಗೆ ಸಚಿವರಾಗಲು ಅವಕಾಶ ಕಲ್ಪಿಸಿಕೊಡಬೇಕು. ಹಿಂದೆ ನಾನು ಮೀನುಗಾರಿಕಾ ಸಚಿವನಾಗಿ ಕಾರ್ಯನಿರ್ವಹಿಸಿದ್ದು, ಸಚಿವ ಸ್ಥಾನ ಬಿಡುವ ಸಂದರ್ಭ ಬಂದಾಗ ಸಂತೋಷದಿಂದಲೇ ಬಿಟ್ಟುಕೊಟ್ಟಿದ್ದೇನೆ. ಹಿರಿಯರು, ಯುವ ತಲೆಮಾರಿಗೆ ಆದರ್ಶರಾಗಬೇಕು. ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸಲು ಸಹಕರಿಸಬೇಕು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article