ಆಶಯ ಸಹಕಾರಿ ಸಂಘದ ಮಹಾಸಭೆ: ರೂ 300 ಕೋಟಿ ವ್ಯವಹಾರ, ಹಲವು ಹೊಸ ಯೋಜನೆಗಳಿಗೆ ಚಾಲನೆ

ಆಶಯ ಸಹಕಾರಿ ಸಂಘದ ಮಹಾಸಭೆ: ರೂ 300 ಕೋಟಿ ವ್ಯವಹಾರ, ಹಲವು ಹೊಸ ಯೋಜನೆಗಳಿಗೆ ಚಾಲನೆ


ಮೂಡುಬಿದಿರೆ: ಇಲ್ಲಿನ ಆಶಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಹದಿಮೂರನೇ  ಸಾಮಾನ್ಯ ಮಹಾಸಭೆ ಹಾಗೂ ಹನ್ನೆರಡನೇ ವಾರ್ಷಿಕ ಮಹಾಸಭೆಯು ಶುಕ್ರವಾರ ಸಂಜೆ ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಿತು. 

ಸಂಘದ ಅಧ್ಯಕ್ಷ  ಎಂ. ಕೆ. ಸುವ್ರತ್ ಕುಮಾರ್ ಸದಸ್ಯರ ಹಿತದೃಷ್ಠಿಯಿಂದ ಹಲವು ಹೊಸ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿ  ಸಂಸ್ಥೆಯ ಕಳೆದ 12–13 ವರ್ಷಗಳ ಪಯಣದೊಂದಿಗೆ ಸಾಗುತ್ತಿದೆ. ಎರಡು ಶಾಖೆಗಳನ್ನು ಹೊಂದಿರುವ  ಆಶಯವು ಕಳೆದ ಸಾಲಿನಲ್ಲಿ 300 ಕೋಟಿ ರೂ ದಾಖಲೆಯ ವ್ಯವಹಾರವನ್ನು ಮಾಡಿದೆ. ಸಣ್ಣ ಸಹಕಾರಿ ಸಂಸ್ಥೆಯಾಗಿ ಆರಂಭಗೊಂಡ ಆಶಯ ಇಂದು ಕಾರ್ಕಳ ಮತ್ತು ಮೂಡುಬಿದಿರೆಯಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿಕೊಂಡಿದೆ. ಸದಸ್ಯರು, ಷೇರುದಾರರು, ನಿರ್ದೇಶಕರು ಹಾಗೂ ಸಿಬ್ಬಂದಿಯ ನಿರಂತರ ಸಹಕಾರದಿಂದ ಸಂಸ್ಥೆ ಈ ಮಟ್ಟಕ್ಕೆ ಬೆಳೆದಿದೆ.

ಕಾರ್ಕಳ ಶಾಖೆಯ ಸ್ವಂತ ಕಟ್ಟಡ ಸಂಸ್ಥೆಯ ಬೆಳವಣಿಗೆಯ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದಾಗಿದೆ. ಹಲವು ವರ್ಷಗಳ ಕಾಲ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಿದ್ದ ಸಂಸ್ಥೆಯು  ಕಾರ್ಕಳದಲ್ಲಿ ಈ ವಷ೯ದಿಂದ ಸ್ವಂತ ಕಟ್ಟಡದಲ್ಲಿ ಕಾಯಾ೯ರಂಭಗೊಳಿಸಿದೆ.  ಸುಮಾರು 3,200 ಚದರ ಅಡಿ ವಿಸ್ತೀರ್ಣ ಹೊಂದಿರುವ ಕಟ್ಟಡದಲ್ಲಿ ಆಧುನಿಕ ಸೌಲಭ್ಯಗಳೊಂದಿಗೆ ಚಲನ ಸಂವೇದಕಗಳು, ಬಲಿಷ್ಠ ಸುರಕ್ಷತಾ ಕೊಠಡಿ ಸೇರಿದಂತೆ ಉತ್ತಮ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮೂಡುಬಿದಿರೆ ಶಾಖೆಗೂ ಇದೇ ರೀತಿಯ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಿಸುವ ಆಶಯವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.

ಸದಸ್ಯರ ಆರೋಗ್ಯದ ದೃಷ್ಟಿಯಿಂದ 9 ಆಮ್ಲಜನಕ ಸಾಂದ್ರಕಗಳನ್ನು ಸಂಘಕ್ಕೆ ಲಭಿಸಿದ್ದು, ಅಗತ್ಯ ಸಂದರ್ಭದಲ್ಲಿ ಸದಸ್ಯರಿಗೆ ಕೇವಲ ₹100ರ ಸೇವಾ ಶುಲ್ಕದಲ್ಲಿ ಒದಗಿಸಲಾಗುವುದು ಎಂದ ಅವರು ಹಲವು ಹೊಸ ಯೋಜನೆಗಳ ಮೂಲಕ ಸದಸ್ಯರಿಗೆ ನೀಡಲಾಗುತ್ತಿರುವ ಸೌಲಭ್ಯಗಳು ಹಾಗೂ ಮುಂದಿನ ಯೋಜನೆಗಳ ಕುರಿತು ವಿವರಿಸಿದರು. ಇ-ಸ್ಟಾಂಪಿಂಗ್ ಸೇವೆಯ ಮಹತ್ವವನ್ನೂ ಅವರು ವಿವರಿಸಿದರು.

ಸದಸ್ಯರ ಪ್ರತಿಭೆ ಹಾಗೂ ಸೃಜನಶೀಲತೆಗೆ ವೇದಿಕೆ ಒದಗಿಸುವ ಉದ್ದೇಶದಿಂದ ‘ಆಶಯ ಬುಲೆಟಿನ್’ ಅನ್ನು ಈ ಸಂದರ್ಭದಲ್ಲಿ ಅನಾವರಣಗೊಳಿಸಲಾಯಿತು.

ಹಿರಿಯ ನಿರ್ದೇಶಕರಾದ ಮೋಹನ್ ಪಡಿವಾಳ್ ಮಾತನಾಡಿ, ಆಶಯ ಸಹಕಾರಿಯು ಅಧ್ಯಕ್ಷರಾದ ಎಂ.ಕೆ ಸುವ್ರತ್ ಕುಮಾರ್ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿದರು.

ಲೆಕ್ಕಪರಿಶೋಧಕ ಉಮೇಶ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಆಶಯ ಸಹಕಾರಿಯ ಉಪಾಧ್ಯಕ್ಷರಾದ  ರಾಬರ್ಟ್ ರೊನಾಲ್ಡ್  ಫೆರ್ನಾಂಡಿಸ್ ಸ್ವಾಗತಿಸಿದರು.  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಶೇಖರ್ ರಾವ್ ಸಾಧನೆಯ ವರದಿ ಮಂಡಿಸಿದರು.  ನಿರ್ದೇಶಕರಾದ  ನಿರಂಜನ್ ಜೈನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article