ಇಬ್ಬರು ಕೃಷ್ಣ ವೇಷಧಾರಿಗಳು ಚೆಂಡೆಯ ನಾದದೊಂದಿಗೆ ಮನಮೋಹಕವಾಗಿ ನೃತ್ಯ ಪ್ರದರ್ಶನ: ಮೊಸರುಕುಡಿಕರ ಒಡೆಯುವ ಪರೂಪದ ದೃಶ್ಯ
ಮೂಡುಬಿದಿರೆ: ಮೂಡುಬಿದಿರೆಯಲ್ಲಿ ನಡೆಯುವ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಅತ್ಯಂತ ವಿಭಿನ್ನ ಹಾಗೂ ವಿಶಿಷ್ಟ. ಶತಮಾನಗಳ ಧಾರ್ಮಿಕ ಪರಂಪರೆಯುಳ್ಳ ಈ ಮೊಸರು ಕುಡಿಕೆ ಉತ್ಸವದಲ್ಲಿ, ಈ ಬಾರಿ ಇಬ್ಬರು ಕೃಷ್ಣ ವೇಷಧಾರಿಗಳು ಚೆಂಡೆಯ ನಾದದೊಂದಿಗೆ ಮನಮೋಹಕವಾಗಿ ನೃತ್ಯ ಪ್ರದರ್ಶಿಸುತ್ತಾ ಮೊಸರಿನ ಕುಡಿಕೆಯನ್ನು ಒಡೆಯುವ ಅಪರೂಪದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಒಂದು ಮಹಾಸಂಭ್ರಮ.
ಬೇರೆಲ್ಲೂ ಕಾಣಸಿಗದ ಇಂತಹ ಅದ್ಭುತ ಸಾಂಸ್ಕೃತಿಕ ಕ್ಷಣಗಳನ್ನು ಸೆರೆಹಿಡಿಯಲು ಮತ್ತು ಸೃಜನಶೀಲತೆಯನ್ನು ಗೌರವಿಸಲು, ನಮ್ಮ SKPA ಮೂಡುಬಿದಿರೆ ವಲಯವು ಜಿಲ್ಲಾ ಮಟ್ಟದಲ್ಲಿ SKPA ಸದಸ್ಯರಿಗಾಗಿ ವಿಶೇಷ ಸ್ಪರ್ಧೆಗಳನ್ನು ಹಮ್ಮಿಕೊಂಡಿದೆ.
ಸ್ಪರ್ಧೆಯ ವಿವರಗಳು:
ಫೋಟೋಗ್ರಫಿ ಸ್ಪರ್ಧೆ:
ಮೂಡುಬಿದಿರೆ ಪೇಟೆಯಲ್ಲಿ ನಡೆಯುವ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ಕ್ಲಿಕ್ಕಿಸಿದ ಆಕರ್ಷಕ ಛಾಯಾಚಿತ್ರಗಳಿಗೆ ಮುಕ್ತ ಅವಕಾಶ.
ಪ್ರಥಮ: ನಗದು ಹಾಗೂ ಪ್ರಶಸ್ತಿ ಪತ್ರ, ದ್ವಿತೀಯ: ನಗದು ಹಾಗೂ ಪ್ರಶಸ್ತಿ ಪತ್ರ, ತೃತೀಯ: ನಗದು ಹಾಗೂ ಪ್ರಶಸ್ತಿ ಪತ್ರ
ವಿಡಿಯೋ ಎಡಿಟಿಂಗ್ ಸ್ಪರ್ಧೆ:
ಮೊದಲ ಬಾರಿಗೆ: ವಿಡಿಯೋ ಎಡಿಟರ್‌ಗಳ ವೃತ್ತಿ ಕೌಶಲ್ಯ ಪ್ರದರ್ಶನಕ್ಕಾಗಿ ವಿಭಿನ್ನ ಸ್ಪರ್ಧೆ!
ವಿಡಿಯೋ ಎಡಿಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸುವುದು ಸುಲಭ. ನಮ್ಮ ಸದಸ್ಯರು ಕ್ರಿಯಾತ್ಮಕವಾಗಿ ಚಿತ್ರೀಕರಿಸಿದ ವಿಡಿಯೋ ಫೂಟೇಜ್‌ಗಳನ್ನು Google Drive ಮೂಲಕ ನಾವು ನೀಡಲಿದ್ದು ಅದರ ಫೂಟೇಜ್ ಬಳಸಿಕೊಂಡು ನಿಮ್ಮ ಕಲಾತ್ಮಕ ಎಡಿಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿ ಬಹುಮಾನ ಗೆಲ್ಲಿ.
ಪ್ರಥಮ: ನಗದು ಹಾಗೂ ಪ್ರಶಸ್ತಿ ಪತ್ರ, ದ್ವಿತೀಯ: ನಗದು ಹಾಗೂ ಪ್ರಶಸ್ತಿ ಪತ್ರ.
ಈ ಐತಿಹಾಸಿಕ ಸಂಭ್ರಮದ ಸಂದರ್ಭದಲ್ಲಿ ಆಯೋಜಿಸಲಾಗಿರುವ ಈ ಸ್ಪರ್ಧೆಯು ನಿಮ್ಮೆಲ್ಲರ ಸಕ್ರಿಯ ಸಹಕಾರ ಹಾಗೂ ಪ್ರೋತ್ಸಾಹದಿಂದ ಖಂಡಿತ ಯಶಸ್ವಿಯಾಗಲಿದೆ ಎಂಬ ನಂಬಿಕೆಯಿದೆ.
ಹೆಚ್ಚಿನ ಮಾಹಿತಿಗಾಗಿ ಮೂಡುಬಿದಿರೆ ವಲಯದ ಛಾಯಾ ಕಾರ್ಯದರ್ಶಿ ಸತೀಶ್ ಎಂ. ಮೊ.ನಂ.: 7760621093 ಸಂಪರ್ಕಿಸಬಹುದಾಗಿದೆ.