ಏರ್ ಪೋಟ್೯ ಅಥಾರಟಿ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ವಿಶ್ವನಾಥ್ ಶೆಟ್ಟಿ ನಿಧನ
Friday, August 7, 2026
ಮೂಡುಬಿದಿರೆ: ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ, ಮೂಡುಕೊಣಾಜೆ ಗ್ರಾಮದ 'ವಿಶ್ವಶೀಲ' ನಿವಾಸಿ ಕೆ. ವಿಶ್ವನಾಥ ಶೆಟ್ಟಿ (86) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾದರು.
ಐದು ವರ್ಷ ದೇಶದ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ ವಿವಿಧೆಡೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರಿಗೆ ನಾಲ್ವರು ಗಂಡು ಹಾಗು ಇಬ್ಬರು ಹೆಣ್ಣುಮಕ್ಕಳಿದ್ದಾರೆ.