ಮೂಡುಬಿದಿರೆ ವಿಹಿಂಪ-ಬಜರಂಗದಳದಿಂದ ಪಂಜಿನ ಮೆರವಣಿಗೆ

ಮೂಡುಬಿದಿರೆ ವಿಹಿಂಪ-ಬಜರಂಗದಳದಿಂದ ಪಂಜಿನ ಮೆರವಣಿಗೆ

ನಿರಂತರ ಹೋರಾಟದೊಂದಿಗೆ ಅಖಂಡತೆಯನ್ನು ಕಾಪಾಡೋಣ: ನರೇಶ್


ಮೂಡುಬಿದಿರೆ: ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಮೂಡುಬಿದಿರೆ ತಾಲೂಕು ವಿಹಿಂಪ ಮತ್ತು ಬಜರಂಗದಳದಿಂದ ಶುಕ್ರವಾರ ಸಂಜೆ  ಸಾವಿರ ಕಂಬದ ಬಸದಿಯಿಂದ ಮೂಡುಬಿದಿರೆ ಸಮಾಜ ಮಂದಿರದವರೆಗೆ ಪಂಜಿನ ಮೆರವಣಿಗೆ ನಡೆಯಿತು.


ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀತಿ೯ ಪಂಡಿತಾಚಾಯ೯ವಯ೯ ಸ್ವಾಮೀಜಿ ಸಾವಿರ ಕಂಬದ ಬಳಿ ಮೆರವಣಿಗೆಗೆ ಚಾಲನೆ ನೀಡಿದರು.


ನಂತರ ಸಮಾಜ ಮಂದಿರದಲ್ಲಿ ನಡೆದ ಸಭಾ ಕಾಯ೯ಕ್ರಮದಲ್ಲಿ ಪ್ರಾಂತ ಬಲೋಪಸಣಾ ಕೇಂದ್ರದ ಪ್ರಮುಖ್ ನರೇಶ್ ಬೌಧಿಕ್ ನೀಡಿ  ಅನೇಕ ಕ್ರಾಂತಿಕಾರಿ ಶಿರೋಮಣಿಗಳ ತ್ಯಾಗ, ಬಲಿದಾನ, ಸಮಪ೯ಣಾಭಾವದಿಂದ ಭಾರತ ಸ್ವತಂತ್ರವಾಗಿದೆ. ಕೇವಲ ಯುವಕರು ಮಾತ್ರ ಸ್ವಾತಂತ್ರ್ಯಕ್ಕಾಗಿ ಬಲಿದಾನ ಕೊಟ್ಟಿಲ್ಲ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ 81ರ ಹರೆಯದ ಕುಮಾರ್ ಸಿಂಗ್ ನಂತಹ ಹಿರಿಯರು ಕೂಡ ಬಲಿದಾನವಾಗಿದ್ದಾರೆ. ಈ ರೀತಿಯ ನಿರಂತರ ಹೋರಾಟ, ತ್ಯಾಗ, ಬಲಿದಾನಗಳ ಮೂಲಕ ವಿಭಜಿತ ಭಾರತ ಸ್ವಾತಂತ್ರ್ಯವನ್ನು ಪಡೆದುಕೊಂಡಿತು ಎಂದು ಹೇಳಿದರು. 


ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದಭ೯ ಆಚರಣೆ ಮಾಡಿದ್ದು ಹೂವಿನ ಹಾಸಿಗೆ ಮಾಡಿ ಅಲ್ಲ. ಬದಲಾಗಿ ಲಾಹೋರ್ ನಿಂದ ಬಂದ ರೈಲಿನಲ್ಲಿ ಲಕ್ಷಾಂತರ ಸಾವ೯ಜನಿಕರ, ಹಿಂದೂ ಬಂಧುಗಳ ಚೆಲ್ಲಾಡಿದಂತಹ ರಕ್ತಸಿಕ್ತ ದೇಹಗಳು ಈ ದೇಶಕ್ಕೆ ಬಂದವು. ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ನಡೆದಿತ್ತು ಈ ದೇಹಗಳ ಮೇಲೆ ನಿಂತು ನಾವು ಸ್ವಾತಂತ್ರ್ಯವನ್ನು ಆಚರಿಸಿದೆವು. 

ರಾಜಕರಣಿಗಳ ಮುಸ್ಲಿಂ ತುಷ್ಠೀಕರಣದ ನೀತಿಯಿಂದಾಗಿ ದೇಶ ವಿಭಜನೆಯಾಗಲು ಕಾರಣವಾಯಿತು ಈ ಮೂಲಕ ದೇಶದಲ್ಲಿ ಲವ್ ಜಿಹಾದ್, ಗೋಹತ್ಯೆ, ಮತಾಂಧತೆ ಕೆಲಸ ಮಾಡುತ್ತಿವೆ ಎಂದ ಅವರು ಈ ದೇಶವನ್ನು ರಕ್ಷಣೆ ಮಾಡಿರುವಂತಹ ಶೌಯ೯ಯುತ  ಸಮಾಜ ಹಿಂದೂ ಸಮಾಜವಾಗಿದೆ ಮುಂದೆಯೂ ನಿರಂತರ ಹೋರಾಟ ಮಾಡುವ ಮೂಲಕ ಅಖಂಡತೆಯನ್ನು ಕಾಪಾಡುವ ಹೊಣೆ ನಮ್ಮ ಮೇಲಿದೆ ಎಂದರು.

ನಿವೃತ್ತ ಪೊಲೀಸ್ ಉಪ ನಿರೀಕ್ಷಕ ರಾಜಾರಾಮ್ ನಾಗರಕಟ್ಟೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಪಾಕಿಸ್ಥಾನಕ್ಕೆ ಔಷಧ ಮತ್ತು ನೀರು ಹೋಗುವುದು ನಮ್ಮ ದೇಶದಿಂದ ಆದರೂ ಅವರು ನಮಗೆ ವಿರೋಧ. ನಮ್ಮದೇ ದೇಶದಲ್ಲಿ ಗಾಳಿ, ಆಹಾರ ಸೇವಿಸುವ ನಮ್ಮವರೇ ನಮ್ಮ ನಾಯಕರ ಬಗ್ಗೆ ವಿರೋಧ ಮಾತನಾಡುವುದು ಇದು ನಮಗೆ ನೋವುತರುವಂತದ್ದು. ಮತ್ತು ಸಂಘಟನೆಯಲ್ಲಿದ್ದು ಮತ್ತೆ ಬಿಟ್ಟು ಹೋದ ನಂತರ ಮಾತನಾಡುವುದು ಸರಿಯಲ್ಲ ಎಂದರು. 

ವಿಹಿಂಪ ಮೂಡುಬಿದಿರೆ ಪ್ರಖಂಡದ ಅಧ್ಯಕ್ಷ ಶಾಂತರಾಮ ಕುಡ್ವ ಈ ಸಂದಭ೯ದಲ್ಲಿದ್ದರು. 

ವಿಹಿಂಪದ ಕಾಯಾ೯ಧ್ಯಕ್ಷ ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 79 ವಷ೯ಗಳ ಹಿಂದೆ ನಮ್ಮ ದೇಶ ಅಖಂಡವಾಗಿತ್ತು. ರಾಜಕರಣಿಗಳ ಅವರವರ ಲಾಭಕ್ಕಾಗಿ ದೇಶ ತುಂಡಾಗಿದೆ. ಮುಂದಿನ ದಿನಗಳಲ್ಲಿ ಅಖಂಡವಾಗಲು ಸಂಕಲ್ಪ ಮಾಡಬೇಕು ಎಂದರು.

ಸಂಪತ್ ಕೊಣಾಜೆ ಕಾಯ೯ಕ್ರಮ ನಿರೂಪಿಸಿದರು. 

ಇದಕ್ಕೂ ಸಾವಿರ ಕಂಬದ ಬಸದಿಯಿಂದ ಸಮಾಜ ಮಂದಿರದವರೆಗೆ ನಡೆದ ಪಂಜಿನ ಮೆರವಣಿಗೆಯಲ್ಲಿ ವಿಹಿಂಪದ ತಾಲೂಕು ಕಾಯ೯ದಶಿ೯ ಪ್ರವೀಣ್ ಕನ್ಯಾಂಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸುದಶ೯ನ್ ಎಂ, ಬಿಜೆಪಿ ಮುಲ್ಕಿ-ಮೂಡುಬಿದಿರೆ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಪ್ರ. ಕಾಯ೯ದಶಿ೯ ರಂಜಿತ್ ಪೂಜಾರಿ ಪುರಸಭೆಯ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಯುವಮೋಚಾ೯ದ ಅಧ್ಯಕ್ಷ ಕುಮಾರ್ ಪ್ರಸಾದ್, ಉಪಾಧ್ಯಕ್ಷ ಸಚಿನ್ ಪಣಪಿಲ, ಕಾಯ೯ದಶಿ೯ ಭರತ್ ಶೆಟ್ಟಿ, ಪ್ರಮುಖರಾದ ಕೆ. ಪಿ. ಸುಚರಿತ ಶೆಟ್ಟಿ, ಈಶ್ವರ್ ಕಟೀಲು, ಕೆ. ಪಿ. ಜಗದೀಶ ಅಧಿಕಾರಿ,  ಕಸ್ತೂರಿ ಪಂಜ, ಲೀಲಾ ಬಂಜನ್, ಸುಕೇಶ್ ಶೆಟ್ಟಿ ಎದಮಾರು, ಅಶ್ವಥ್ ಪಣಪಿಲ, ಚಾವಡಿಮನೆ ಜಗನ್ನಾಥ ಶೆಟ್ಟಿ ಬಜರಂಗದಳದ ಅಭಿಲಾಷ್ ಅಜು೯ನಾಪುರ, ರಮಿತಾ ಸೂಯ೯ವಂಶಿ, ಸುನೀಲ್ ಪಣಪಿಲ, ಪವರ್ ಫ್ರೆಂಡ್ಸ್ ನ ಅಧ್ಯಕ್ಷ ವಿನಯ್ ಕುಮಾರ್, ಸವೋ೯ದಯ ಫ್ರೆಂಡ್ಸ್ ಬೆದ್ರದ ಅಧ್ಯಕ್ಷ ಗುರು, ನೇತಾಜಿ ಬ್ರಿಗೇಡ್ ನ ರಾಹುಲ್ ಕುಲಾಲ್, ಜವನೆರ್ ಬೆದ್ರದ ಅಮರ್ ಕೋಟೆ, ಇಲೆವೆನ್ ಬೆದ್ರದ ಅಖಿಲ್, ತ್ರಿಶೂಲ್ ಫ್ರೆಂಡ್ಸ್ ನ ರಕ್ಷಿತ್ ಸಹಿತ ಕಾಯ೯ಕತ೯ರು ಪಾಲ್ಗೊಂಡಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article