ಫಿಲೋಮಿನಾ ಪ.ಪೂ ಕಾಲೇಜಿಗೆ ‘ಫಿಲೋನೆಕ್ಸ-2026’: ಅಂತರ್ ಕಾಲೇಜು ಮಟ್ಟದ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ
Saturday, August 29, 2026
ಪುತ್ತೂರು: ಸಂತ ಫಿಲೋಮಿನಾ (ಸ್ವಾಯತ್ತ) ಕಾಲೇಜು ಪುತ್ತೂರು ಇದರ ಆಶ್ರಯದಲ್ಲಿ ಆ.28 ರಂದು ನಡೆದ ‘ಫಿಲೋನೆಕ್ಸ-2026’ ಅಂತರ್ ಕಾಲೇಜು ಮಟ್ಟದ ವಿವಿಧ ಸ್ಪರ್ಧೆಯಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ.
ವಿಜ್ಞಾನ ಮಾದರಿ ತಯಾರಿ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಶಿಶಿರ್ ರೈ ಹಾಗೂ ಆಶ್ರಯ್ ಎ. ಶೆಟ್ಟಿ ಪ್ರಥಮ ಸ್ಥಾನ ಹಾಗೂ ವಿಜ್ಞಾನ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಸಿಯಾ ಸುಧೀರ್ ಹಾಗೂ ನಮೃತ ಕಡೆಂಬ್ಯಲ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ಸಂಘದ ಸುಮನಾ ರಾವ್, ಉಷಾ ರೈ, ಅವಿನಾ ಮಾಡ್ತಾ, ಡಾ. ಲತಾ ಹಾಗೂ ಸಂದೇಶ್ ಜಾನ್ ಲೋಬೋ ಉಪಸ್ಥಿತರಿದ್ದರು.