ತಿರಂಗಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಭಾಗಿ

ತಿರಂಗಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಭಾಗಿ


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ತಿರಂಗ ಯಾತ್ರೆ ಸಮಿತಿಯ ವತಿಯಿಂದ ಆ. 7ರಂದು ಸಂಜೆ 3ಕ್ಕೆ ಪುತ್ತೂರಿನಲ್ಲಿ ಬೃಹತ್ ತಿರಂಗ ಯಾತ್ರೆ ನಡೆಯಲಿದ್ದು, ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದರು.

ಅವರು ಸೋಮವಾರ ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಪ್ರಧಾನಿ ಮೋದಿಯವರು ಹರ್ ಘರ್ ತಿರಂಗಾ ಅಭಿಯಾನ ಕೈಗೊಂಡ ಬಳಿಕ ದೇಶದ 23 ಕೋಟಿ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಾಡಿದ್ದು, ಕಳೆದ ವರ್ಷ 75 ಲಕ್ಷ ಯುವಕರು ರಾಷ್ಟ್ರಧ್ವಜದೊಂದಿಗೆ ಸೆಲ್ಫಿ ತೆಗೆದು ಸರಳ್ ಆಪ್ ಮೂಲಕ ಅಪ್ ಲೋಡ್ ಮಾಡಿದ್ದರು.

ಹೊಸದಿಲ್ಲಿಯ ಜಂತರ್-ಮಂಥರ್ ನಲ್ಲಿ ಕಾಂಕ್ರೋಜ್ ಪಾರ್ಟಿಯವರು ಪಾಕಿಸ್ಥಾನಿಗಳು, ವಿದೇಶಿ ಕೈವಾಡದೊಂದಿಗೆ ನಡೆಸಿದ ಪ್ರತಿಭಟನಾಕಾರಿಗೆ ಉತ್ತರ ನೀಡಿ ಪ್ರಧಾನಿಗಳಿಗೆ ಶಕ್ತಿ ತುಂಬುವ ಕಾರ್ಯ ಮಾಡಬೇಕಿದೆ. ದೇಶದ ಸೈನಿಕರು, ರೈತರ ಗೌರವದ ಜತೆಗೆ ರಾಷ್ಟ್ರಧ್ವಜದ ಗೌರವಾರ್ಥ ಈ ತಿರಂಗಾ ಯಾತ್ರೆಯನ್ನು ಕೈಗೊಂಡಿದ್ದೇವೆ. ಈ ಯಾತ್ರೆಯ ಮೂಲಕ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಎಲ್ಲರನ್ನು ಒಟ್ಟು ಮಾಡುವ ಕಾರ್ಯ ನಡೆಯಲಿದೆ ಎಂದರು.

ಈ ಯಾತ್ರೆಯಲ್ಲಿ ಪುತ್ತೂರಿನ ದೇಶಭಕ್ತರು, ಯುವಕರು, ಮಾಜಿ ಸೈನಿಕರು ಸೇರಿ ಸುಮಾರು 5 ಸಾವಿರ ಮಂದಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷರ ಜತೆಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಜಿಲ್ಲೆಯ ವಿವಿಧ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಸಂಜೆ 3ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಯಾತ್ರೆ ಪ್ರಾರಂಭಗೊಂಡು ಕಿಲ್ಲೆ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಪ್ರತಿಯೊಬ್ಬರು ಕೂಡ ರಾಷ್ಟ್ರಧ್ವಜ ಹಿಡಿದು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಪ್ರಮುಖರಾದ ಯತೀಶ್ ಆರ್ವಾರ್, ಪ್ರಸನ್ನ ಮಾರ್ತ, ಸುನೀಲ್ ಆಳ್ವ, ದಯಾನಂದ ಶೆಟ್ಟಿ ಉಜಿರೆಮಾರ್, ಶಿವಕುಮಾರ್ ಕಳ್ಳಿಮಾರ್, ರಾಜೇಶ್ ಬನ್ನೂರು, ಸತೀಶ್ ನಾಯ್ಕ್, ಮಹೇಶ್ ಕೇರಿ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article