ಸೃಜನಶೀಲತೆಗೆ ಓದು-ಸಂಹವನ ಜತೆಯಾಗಿರಬೇಕು: ಡಾ.ಆಂಟನಿ ಪ್ರಕಾಶ್
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜು, ಗ್ರಂಥಾಲಯ-ಮಾಹಿತಿ ಕೇಂದ್ರ ಹಾಗೂ ಲಲಿತ ಕಲಾ ಸಂಘದ ಜಂಟಿ ಆಶ್ರಯದಲ್ಲಿ ‘ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ-2026’ರ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಿಜಿಟಲ್ ಯುಗದಲ್ಲಿ ಗ್ರಂಥಾಲಯದ ಮಹತ್ವ ಎಂಬ ವಿಷಯದ ಕುರಿತು ನಡೆದ ಈ ಸ್ಪರ್ಧೆಯಲ್ಲಿ 45 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ವೈವಿಧ್ಯಮಯ ವಿಚಾರಗಳನ್ನು ಪ್ರಸ್ತುತಪಡಿಸಿದರು. ಈ ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ ಮತ್ತು ಸಂವಹನ ಕಲೆಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಂಥಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಈ ವಿಶೇಷ ಸ್ಪರ್ಧೆಯ ತೀರ್ಪುಗಾರರಾಗಿ ನಿವೃತ್ತ ಕನ್ನಡ ಉಪನ್ಯಾಸಕರಾದ ನೇಮಿಚಂದ್ರ ಗೌಡ ಎಂ. ಮತ್ತು ನಿವೃತ್ತ ಗ್ರಂಥಪಾಲಕರಾದ ರಾಮಚಂದ್ರ ಅವರು ಭಾಗವಹಿಸಿದ್ದರು.
ಸ್ಪರ್ಧೆಯ ಫಲಿತಾಂಶ:
ಈ ಭಾಷಣ ಸ್ಪರ್ಧೆಯಲ್ಲಿ ಅಂತಿಮ ಬಿ.ಎಸ್ಸಿ. ವಿಭಾಗದ ವಿಂದ್ಯಾಶ್ರೀ ರೈ ಪ್ರಥಮ ಬಹುಮಾನ ಪಡೆದರು. ದ್ವಿತೀಯ ಬಿ.ಎಸ್ಸಿ. ವಿಭಾಗದ ಶ್ರೀವಿದ್ಯಾ ಎನ್. 2ನೇ ಬಹುಮಾನ ಪಡೆದುಕೊಂಡರು. ಅಂತಿಮ ಬಿ.ಕಾಂ ವಿಭಾಗದ ಲಿಖಿತಾ ಪಿ. ಮತ್ತು ದ್ವಿತೀಯ ಬಿ.ಎಸ್‌ಸಿ. (ಡೇಟಾ ಸೈನ್ಸ್) ವಿಭಾಗದ ಭವಿತ್ ಎ. ತೃತೀಯ ಬಹುಮಾನವನ್ನು ಹಂಚಿಕೊಂಡರು.
ಕಾಲೇಜಿನ ಆಯ್ಕೆ ಶ್ರೇಣಿ ಗ್ರಂಥಪಾಲಕರಾದ ಅಬ್ದುಲ್ ರೆಹಮಾನ್ ವಂದಿಸಿದರು. ಪ್ರಥಮ ಬಿ.ಬಿ.ಎ ವಿಭಾಗದ ಸನ್ನಿಧಿ ಮತ್ತು ಅಂತಿಮ ಬಿ.ಎಸ್ಸಿ. ವಿಭಾಗದ ಮಾನಸ ಪ್ರಾರ್ಥಿಸಿದರು. ಸ್ನಾತಕೋತ್ತರ ವಿಭಾಗದ ಗ್ರಂಥಪಾಲಕರಾದ ಮನೋಹರ್ ಉಪಸ್ಥಿತರಿದ್ದರು. ಲಲಿತಕಲಾ ಸಂಘದ ನಿರ್ದೇಶಕರಾದ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು.