ಜೆರಾಕ್ಸ್ ಅಂಗಡಿಯಲ್ಲಿ ದಾಖಲೆ ಹಾಳಾದ ಪ್ರಕರಣ: ಇತ್ತಂಡಗಳ ನಡುವೆ ಮಾತಿನ ಚಕಮುಕಿ-ಪೋಲಿಸರಿಂದ ಲಘುಲಾಠಿ ಪ್ರಹಾರ

ಜೆರಾಕ್ಸ್ ಅಂಗಡಿಯಲ್ಲಿ ದಾಖಲೆ ಹಾಳಾದ ಪ್ರಕರಣ: ಇತ್ತಂಡಗಳ ನಡುವೆ ಮಾತಿನ ಚಕಮುಕಿ-ಪೋಲಿಸರಿಂದ ಲಘುಲಾಠಿ ಪ್ರಹಾರ


ಪುತ್ತೂರು: ಜೆರಾಕ್ಸ್ ಅಂಗಡಿಯೊಂದರಲ್ಲಿ ತನ್ನ ದಾಖಲೆಗಳಿಗೆ ಲ್ಯಾಮಿನೇಷನ್ ಮಾಡಿಸಲು ಕೊಟ್ಟಿದ್ದು, ಅಂಗಡಿಯಾತ ಅದನ್ನು ಹಾಳುಮಾಡಿದ ವಿಚಾರದ ಘಟನೆಗೆ ಸಂಬಂಧಿಸಿ ಇತ್ತಂಡಗಳು ಗುಂಪು ಸೇರಿ ಪರಸ್ಪರ ಮಾತಿನ ಚಕಮುಕಿ ನಡೆಸಿದ್ದು, ಗುಂಪು ಚದುರಿಸಲು ಪೊಲೀಸರು ಲಘು ಲಾಠಿಪ್ರಹಾರ ನಡೆಸಿದ ಘಟನೆ ಶುಕ್ರವಾರ ಸಂಜೆ ದರ್ಭೆಯಲ್ಲಿ ನಡೆದಿದೆ.

ಅಂಗಡಿಯಾತ ದಾಖಲೆಗೆ ಲ್ಯಾಮಿನೇಷನ್ ಮಾಡುವ ಸಂದರ್ಭ ದಾಖಲೆಗಳು ಹಾಳಾಗಿತ್ತು. ಇದನ್ನು ಗ್ರಾಹಕಿ ಪ್ರಶ್ನಿಸಿದ್ದಾರೆ. ಈ ಸಂದರ್ಭ ಗ್ರಾಹಕಿ ಮತ್ತು ಅಂಗಡಿ ಮಾಲೀಕನ ನಡುವೆ ಮಾತಿನ ಚಕಮುಕಿ ನಡೆದು ಮಹಿಳೆ ಹಾಗೂ ಸಹೋದರನ ಮೇಲೆ ಅಂಗಡಿ ಮಾಲೀಕ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ವ್ಯಕ್ತವಾದ ಕಾರಣ ಪರಿಸ್ಥಿತಿ ವಿಕೋಪಕ್ಕೆ ತೆರಳಿ ಇತ್ತಂಡಗಳು ಗುಂಪುಗಳ ನಡುವೆ ಮಾತಿನ ಚಕಮುಕಿ ನಡೆಯಿತು. ತಕ್ಷಣ ಘಟನಾ ಸ್ಥಳಕ್ಕೆ ಬಂದ ನಗರಠಾಣೆಯ ಪೊಲೀಸರು ಗುಂಪು ಚದುರಿಸಲು ಲಘು ಲಾಠಿಪ್ರಹಾರ ನಡೆಸಿದರು. 

ಈ ನಡುವೆ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಮಹಿಳೆ ಮತ್ತು ಯುವಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದಾರೆ.  ಈ ಹಿನ್ನಲೆಯಲ್ಲಿ ಆಸ್ಪತ್ರೆಯ ಆವರಣದಲ್ಲಿಯೂ ಗುಂಪು ಸೇರಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article