ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಪಡೀಲಿನ ಅದ್ದು ವಿರುದ್ಧ ಫೊಕ್ಸೊ ದಾಖಲು
Tuesday, August 25, 2026
ಪುತ್ತೂರು: ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯನ್ನು ಮನೆಗೆ ಬಿಡುವುದಾಗಿ ಬೈಕಿನಲ್ಲಿ ಕುಳಿತುಕೊಳ್ಳಿಸಿ ದಾರಿಮಧ್ಯೆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ವ್ಯಕ್ತಿಯೊಬ್ಬನ ಮೇಲೆ ಪುತ್ತೂರು ನಗರಠಾಣೆಯಲ್ಲಿ ಫೋಸ್ಕೊ ಪ್ರಕರಣ ದಾಖಲಿಸಲಾಗಿದೆ.
ಆ.23ರಂದು ಈ ಸಂತ್ರಸ್ತ ಬಾಲಕಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದು, ಅಲ್ಲಿಂದ ಮನೆಗೆ ಸುರಕ್ಷಿತವಾಗಿ ತಲುಪಿಸುವ ಹಿನ್ನಲೆಯಲ್ಲಿ ಅದ್ದು ಪಡೀಲ್ ಎಂಬಾತ ತನ್ನ ದ್ವಿಚಕ್ರ ವಾಹನದಲ್ಲಿ ಆಕೆಯನ್ನು ಕುಳ್ಳಿರಿಸಿಕೊಂಡು ಹೋಗಿದ್ದಾನೆ. ಮನೆಗೆ ತಲುಪುವ ಮೊದಲು ಸಂತ್ರಸ್ತೆಯ ಜತೆಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆಯಿಂದ ಆಘಾತಕ್ಕೊಳಗಾದ ಸಂತ್ರಸ್ತ ಬಾಲಕಿ ಮನೆಗೆ ಬಂದ ತಕ್ಷಣ ಈ ಮಾಹಿತಿಯನ್ನು ಮನೆಯವರಿಗೆ ತಿಳಿಸಿದ್ದಾಳೆ. ಈ ಹಿನ್ನಲೆಯಲ್ಲಿ ಬಾಲಕಿಯ ತಾಯಿ ಪುತ್ತೂರು ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಆರೋಪಿ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.