ಸಂವಿಧಾನದಡಿಯಲ್ಲಿ ಎಲ್ಲರೂ ಕೆಲಸ ಮಾಡಬೇಕು, ರಾಜ್ಯದಲ್ಲಿ ಸರ್ಕಾರ ಇದೆಯಾ ಸತ್ತಿದೆಯಾ: ಸಂಸದ ಚೌಟ ಆಕ್ರೋಶ
ಸೋಮವಾರ ಅವರು ದರ್ಬೆ ಘಟನೆಯಲ್ಲಿ ಗಾಯಾಳಾಗಿ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿರುವ ಅಂಜನಾ ಪೈ ಅವರ ಯೋಗಕ್ಷೇಮ ವಿಚಾರಿಸಿದ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದರು.
ರೌಡಿ ಮಾನಸಿಕತೆಯ ಕೆಲವರು ನಾವು ಏನು ಮಾಡಿದರೂ ನಡೆಯುತ್ತದೆ ಎಂದು ಅಂದುಕೊಂಡಿದ್ದಾರೆ. ಆದರೆ ಪುತ್ತೂರಿನಲ್ಲಿ ಅದು ನಡೆಯುವುದಿಲ್ಲ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ ಎಂದು ಕೊಂಡಿದ್ದಾರೆ. ಸರ್ಕಾರ ಬದಲಾಗುತ್ತದೆ. ಆದ್ರೆ ಕಾನೂನು ಒಂದೇ ಆಗಿರುತ್ತದೆ. ಈ ನೆಲದ ಕಾನೂನು ಸಂವಿಧಾನ. ಅದರಡಿಯಲ್ಲಿ ಎಲ್ಲರೂ ಕೆಲಸ ಮಾಡಬೇಕು. ಆಶ್ವರ್ಯ ಮತ್ತು ವಿಚಿತ್ರ ಅನ್ನಿಸುತ್ತಿದೆ. ಪೊಲೀಸ್ ಸಿಬಂದಿಗಳ ಎದುರೇ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಪುತ್ತೂರಿನಲ್ಲಿ ಈ ರೀತಿಯ ಸಂಸ್ಕೃತಿ ತೋರಿಸುವುದು ಸರಿಯಲ್ಲ ಎಂದ ಅವರು ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದರು.
ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಪುತ್ತೂರು ಮಂಡಲ ಪ್ರಭಾರಿ ಸುನೀಲ್ ಹೆಗ್ಡೆ, ಮುಖಂಡರಾದ ಚಂದ್ರಶೇಖರ ರಾವ್ ಬಪ್ಪಳಿಗೆ ಮತ್ತಿತರರು ಭಾಗವಹಿಸಿದ್ದರು.