ಕುಕ್ಕೆ ದೇವಳದಲ್ಲಿ ಆಗಸ್ಟ್ 23, 24ರಂದು ಸೇವೆಗಳು ಇರುವುದಿಲ್ಲ
Friday, August 21, 2026
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 23 ಹಾಗೂ 24ರಂದು ಸೇವೆಗಳು ಇರುವುದಿಲ್ಲ.
ಆಗಸ್ಟ್ 23ರಂದು ಏಕಾದಶಿ ಹಾಗೂ 24ರಂದು ಅತಿರಿಕ್ತ ಏಕಾದಶಿ ಆಗಿರುವುದರಿಂದ ಆ ಎರಡು ದಿನಗಳಲ್ಲಿ ಸರ್ಪಸಂಸ್ಕಾರ, ಆಶ್ಲೇಷ ಬಲಿ, ಹಾಗೂ ನಾಗ ಪ್ರತಿಷ್ಠ ಸೇವೆಗಳು ಇರುವುದಿಲ್ಲ. ಉಳಿದಂತೆ ಶ್ರೀ ದೇವರ ದರ್ಶನ, ಮಂಗಳಾರತಿ, ಅರ್ಚನೆ, ಮಹಾಪೂಜೆ ಇತ್ಯಾದಿ ಉಳಿದೆಲ್ಲ ಪೂಜೆಗಳು ನಡೆಯಲಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿರುತ್ತದೆ.