ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.3, 4, 6, 7 ಸರ್ಪಸಂಸ್ಕಾರ ಸೇವೆ ಇಲ್ಲ
Sunday, August 23, 2026
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಸೆ.3 ಮತ್ತು ಸೆ.4ರಂದು ಹಾಗೂ ಸೆ.6 ಮತ್ತು ಸೆ.7 ರಂದು ದಶಮಿ ಏಕಾದಶಿ ಪ್ರಯುಕ್ತ ಸರ್ಪಸಂಸ್ಕಾರ ಸೇವೆಯು ಶ್ರೀ ದೇವಳದಲ್ಲಿ ನೆರವೇರುವುದಿಲ್ಲ.
ಸೆ.4ರಂದು ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದು ಹಾಗೂ ಸೆ.7ರಂದು ಏಕಾದಶಿ ದಿನದಂದು ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಭಿಷೇಕಗಳು ನೆರವೇರುವುದಿಲ್ಲ. ಶ್ರೀ ದೇವರ ದರ್ಶನ, ಮಂಗಳಾರತಿ,ಮಹಾಪೂಜೆ, ಶೇಷಸೇವೆ, ಅಭಿಷೇಕಗಳು, ಅರ್ಚನೆ ಸೇವೆಗಳು ಎಂದಿನಂತೆ ನೆರವೇರಲಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ