ಕುಕ್ಕೆ ಸುಬ್ರಹ್ಮಣ್ಯ ರೋಡಿಗೆ ಆಗಮಿಸಿದ ವಂದೇ ಭಾರತ್ ರೈಲು

ಕುಕ್ಕೆ ಸುಬ್ರಹ್ಮಣ್ಯ ರೋಡಿಗೆ ಆಗಮಿಸಿದ ವಂದೇ ಭಾರತ್ ರೈಲು


ಸುಬ್ರಹ್ಮಣ್ಯ: ಪಶ್ಚಿಮ ಘಟ್ಟದ ರೈಲು ಪ್ರಯಾಣಕ್ಕೆ ಸಂಬಂಧಿಸಿದಂತೆ ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯ ರೋಡಿಗೆ ಪ್ರಾಯೋಗಿಕ ಸಂಚಾರದೊಂದಿಗೆ ಮಂಗಳವಾರ ವಂದೇ ಭಾರತ ರೈಲು ಆಗಮಿಸಿತು.

ಒಂದೇ ಭಾರತ ರೈಲು ಸಂಚಾರವು ಬೆಂಗಳೂರು-ಮಂಗಳೂರು ಮಧ್ಯ ಆರಂಭವಾಗುವ ಬಗ್ಗೆ ಈ ಹಿಂದೆ ದಿನ ನಿಗದಿಯಾದಂತೆ ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ವರೆಗಿನ ಘಾಟ್ ಪ್ರದೇಶದಲ್ಲಿ ಮಹತ್ವದ ಪರೀಕ್ಷೆಗಳನ್ನು ಒಳಗೊಂಡಂತೆ ಕಠಿಣ ಘಾಟ್ ಪ್ರದೇಶ ವಾದ್ದರಿಂದ ರೈಲು ಸಂಚಾರವು ಕ್ಲಿಷ್ಟಕರವಾದ ಏರು ಇಳಿಜಾರುಗಳು ಹಾಗೂ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿರಿಸಿ ಈ ಪ್ರಾಯೋಗಿಕ ರೈಲು ಸಂಚಾರ ಆರಂಭವಾಗಿದೆ. 

ವಿಶೇಷವಾಗಿ ಘಾಟ್ ಪ್ರದೇಶದಲ್ಲಿ ಬ್ರೇಕಿಂಗ್ ವ್ಯವಸ್ಥೆ ವೇಗ ನಿಯಂತ್ರಣ ಹಾಗೂ ಇತರ ಸುರಕ್ಷತಾ ಅಂಶಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು ಸಂಚಾರ ಯಶಸ್ವಿಯಾದರೆ ರೈಲಿನ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಬೆಂಗಳೂರು-ಮಂಗಳೂರು ಒಂದೇ ಭಾರತ್ ರೈಲು ಸಂಚಾರ ಮುಂದಿನ ದಿನಗಳಲ್ಲಿ ಆರಂಭವಾಗಲಿದೆ. ಹೀಗಾದಲ್ಲಿ ಕರಾವಳಿಯ ಅಭಿವೃದ್ಧಿಯಲ್ಲಿ ಒಂದು ಮಹತ್ವದ ಮೈಲುಗಲ್ಲಿ ಎನ್ನಬಹುದು.

ಇಂದು ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡಿಗೆ ಆಗಮಿಸಿದ ರೈಲಿನಲ್ಲಿ 20 ಭೋಗಿಗಳು ಇದ್ದವು. ಎಲ್ಲಾ ಭೋಗಿಗಳಲ್ಲೂ ಮರಳುಗಳನ್ನ ತುಂಬಿಸಿ ಘಾಟ್ ಪ್ರದೇಶದಲ್ಲಿ ಭಾರ ಪರೀಕ್ಷೆಯನ್ನು ಮಾಡಲಾಯಿತು. ನಾಳೆಯೂ ಈ ಪರೀಕ್ಷೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ. ಹಾಗೆ ಮುಂದಿನ ೧೬ನೇ ತಾರೀಖಿನಿಂದ 20 ರವರೆಗೆ ಪ್ರಯಾಣಿಕರನ್ನು ತುಂಬಿಸಿ ಸಂಚಾರ ಆರಂಭಿಸಲಾಗುವುದು ಎಂದು ತಿಳಿದುಬಂದಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article