ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಡಗರ ಸಂಭ್ರಮದ ನಾಗರ ಪಂಚಮಿ ಆಚರಣೆ
Monday, August 17, 2026
ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನೆ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ವರ್ಷ ಸೋಮವಾರ ದಂದು ಸಡಗರ ಸಂಭ್ರಮದಿಂದ ನಾಗರ ಪಂಚಮಿಯನ್ನು ಆಚರಿಸಲಾಯಿತು.
ನಾಗರಮ ಪಂಚಮಿ ಪ್ರಯುಕ್ತ ಇಂದು ಬೆಳಗಿನ ವಿಶೇಷ ಪೂಜೆ ನೆರವೇರಿಸಲಾಗಿದೆ ಕ್ಷೇತ್ರದ ಹೊರಾಂಗಣದಲ್ಲಿರುವ ನಾಗ ಪ್ರತಿಷ್ಠಾ ಮಂಟಪದಲ್ಲಿ ನಾಗನ ವಿಗ್ರಹಕ್ಕೆ ತನು ಅರ್ಪಿಸಲು ಮುಂಜಾನೆಯಿಂದಲೇ ಭಕ್ತರ ದಂಡು ಕ್ಷೇತ್ರದಲ್ಲಿ ಕಂಡುಬಂದಿದೆ ಶ್ರೀ ದೇವಳದ ಮುಖ್ಯ ಪುರೋಹಿತರಾದ ಸೀತಾರಾಮ ಎಡಪಡಿತಾಯರ ನೇತೃತ್ವದಲ್ಲಿ ನಾಗನ ವಿಗ್ರಹಕ್ಕೆ ಹಾಲು ಮತ್ತು ಸಿಯಾಳವನ್ನು ಅಭಿಷೇಕ ಮೂಲಕ ಅರ್ಪಿಸಲಾಯಿತು. ಹಾಗೆ ಕ್ಷೇತ್ರದ ಪರಿಸರ ನೆರೆಯ ಹಾಗೂ ಪರ ಊರಿನ ಅಸಂಖ್ಯಾತ ಭಕ್ತರು ಬೆಳಗಿನ ಜಾವದಿಂದಲೇ ಹಾಲು ಸಿಯಾಳ ತಂದು ನಾಗನಿಗೆ ಅರ್ಪಿಸಿದರು.
ಕುಕ್ಕೆ ಕ್ಷೇತ್ರದಲ್ಲಿ ನಡೆಯುತ್ತಿರುವ ಸರ್ಪಸಂಸ್ಕಾರ ಸೇವೆ ನಾಗ ಪ್ರತಿಷ್ಠ ಸೇವೆ ಆಶ್ಲೇಷ ಬದಿ ಸೇವೆ ಪೂಜೆಗಳಿಗೆ ಭಾರಿ ಮಹತ್ವವು ಇದೆ. ದೇಶ ವಿದೇಶಗಳಿಂದ ಅಸಂಖ್ಯಾತ ಭಕ್ತರು ಬಂದು ಇಲ್ಲಿ ಸೇವೆಯನ್ನ ಪೂರೈಸುತ್ತಾರೆ. ಸರ್ಪಸಂಸ್ಕಾರ ಸೇವೆಗೆ ಕುಕ್ಕೆ ಕ್ಷೇತ್ರ ಸರ್ವೋಚ್ಚ ನ್ಯಾಯಾಲಯ ಇದ್ದಹಾಗೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾತ್ರ ಸರ್ಪ ಸಂಸ್ಕಾರ ಸೇವೆ ಮಾಡಿದವರು ಅದರ ಫಲವನ್ನು ಅನುಭವಿಸುದರೊಂದಿಗೆ ನೆನೆಸಿಕೊಂಡ ಹಾಗೂ ಸಂಕಲ್ಪ ಮಾಡಿದ ಎಲ್ಲ ಸಿದ್ದಿ ಕಾರ್ಯಗಳು ಯಥವತ್ತಾಗಿ ನೆರವೇರುತ್ತದೆ. ನಾಗ ಪ್ರತಿಷ್ಠ ಮಂಟಪವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು ಶ್ರೀ ದೇವಳದ ವ್ಯವಸ್ಥಾಪನ ಸಮಿತಿಯವರು, ಅಧಿಕಾರಿಗಳು ಸಿಬ್ಬಂದಿ ವರ್ಗದವರಿದ್ದರು.



