ಹರಿಹರ ಪಳ್ಳತ್ತಡ್ಕ: ಶ್ರೀ ಹರಿಹರೇಶ್ವರ ದೇವರಿಗೆ ಬೆಳ್ಳಿಯ ತ್ರಿನೇತ್ರ ಸಮರ್ಪಣೆ

ಹರಿಹರ ಪಳ್ಳತ್ತಡ್ಕ: ಶ್ರೀ ಹರಿಹರೇಶ್ವರ ದೇವರಿಗೆ ಬೆಳ್ಳಿಯ ತ್ರಿನೇತ್ರ ಸಮರ್ಪಣೆ


ಸುಬ್ರಮಣ್ಯ: ಹರಿಹರ  ಪಳ್ಳತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಆ.29 ಶನಿವಾರದಂದು ಶ್ರೀ ಹರಿಹರೇಶ್ವರ ದೇವರಿಗೆ ರಾಮಕೃಷ್ಣ ಕೂಜುಗೋಡು ಕಟ್ಟೆಮನೆ, ಪರಮೇಶ್ವರ ಕೂಜುಗೋಡು ಕಟ್ಟೆಮನೆ, ಭುವನೇಶ್ವರಿ ಕೂಜುಗೋಡು ಕಟ್ಟೆಮನೆ, ಪ್ರವೀಣ್ ಕೂಜುಗೋಡು ಕಟ್ಟೆಮನೆ, ರಾಧಾಕೃಷ್ಣ ಕೂಜುಗೋಡು ಕಟ್ಟೆಮನೆ, ಚಿನ್ನಮ್ಮ ಕೂಜುಗೋಡು ಕಟ್ಟೆಮನೆ, ಭರತ್ ಕೂಜುಗೋಡು ಕಟ್ಟೆಮನೆ, ಜಲಜಾಕ್ಷಿ, ನವೀನ್ ಕೂಜುಗೋಡು ಕಟ್ಟೆಮನೆ ಇವರು 107 ಗ್ರಾಂ ತೂಕದ ಬೆಳ್ಳಿಯ ತ್ರಿನೇತ್ರವನ್ನು ಹರಕೆಯ ರೂಪದಲ್ಲಿ ಸಲ್ಲಿಸಿದರು. 

ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಜಗದೀಶ್ ಪಡ್ಪು, ಶ್ರೀ ದೇವಳದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಗುಣವರ್ಧನ ಕೆದಿಲ, ಶ್ರೀಮತಿ ಸವಿತಾ ಕಟ್ಟೆಮನೆ, ದಯಾನಂದ ಕಟ್ಟೆಮನೆ ಬೆಳ್ಯಪ್ಪ ಗೌಡ ಖಂಡಿಗೆ ಉಪಸ್ಥಿತರಿದ್ದರು. ಶ್ರೀ ದೇವಳದಲ್ಲಿ ಸೋಣ ಶನಿವಾರದ ಹಿನ್ನೆಲೆಯಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article