ಬಾಳೆ ಹಣ್ಣಿಗೆ ರಾಸಾಯನಿಕ ಬಳಕೆ: ನಾಶಪಡಿಸಿದ ಅಧಿಕಾರಿಗಳು

ಬಾಳೆ ಹಣ್ಣಿಗೆ ರಾಸಾಯನಿಕ ಬಳಕೆ: ನಾಶಪಡಿಸಿದ ಅಧಿಕಾರಿಗಳು


ಉಡುಪಿ: ಬಾಳೆ ಹಣ್ಣಿಗೆ ರಾಸಾಯನಿಕ ಬಳಸಿ ಹಣ್ಣು ಮಾಡುತ್ತಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ಮಾಡಿ, ರಾಸಾಯನಿಕ ಬಳಸಿದ ಬಾಳೆ ಹಣ್ಣನ್ನು ಆ.20 ರಂದು ನಾಶಪಡಿಸಲಾಗಿದೆ.


ಆಹಾರ ಸುರಕ್ಷತೆ ಹಾಗೂ ಔಷಧಿ ಆಡಳಿತ ಉಡುಪಿ ಅಂಕಿತ ಅಧಿಕಾರಿಗಳು, ಉಪ ವಿಭಾಗಾಧಿಕಾರಿ ರಶ್ಮಿ ಎಸ್.ಆರ್ ಹಾಗೂ ಉಡುಪಿ ತಹಸಿಲ್ದಾರ್ ಗುರುರಾಜ್ ಅಧ್ಯಕ್ಷತೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ವಿವೇಕ್ ತ್ರಿಮಲ್ಲೆ ನೇತೃತ್ವದಲ್ಲಿ ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರೊಂದಿಗೆ ದಿಡೀರ್ ಕಾರ್ಯಾಚರಣೆ ನಡೆಸಿ, ಉಡುಪಿಯ ಅಲೆಯೂರು, ಕೆಮ್ತೂರು ಹಾಗೂ ದುಗ್ಲಿಪದವು ಗ್ರಾಮಗಳಲ್ಲಿ ಬಾಳೆಕಾಯನ್ನ ರಾಸಾಯನಿಕ ಬಳಸಿ ಹಣ್ಣು ಮಾಡುತ್ತಿರುವಂತಹ ಮಳಿಗೆಗಳಿಗೆ ದಿಢೀರ್ ದಾಳಿ ಮಾಡಿ ರಾಸಾಯನಿಕ ಬಳಸಿದ ಬಾಳೆಹಣ್ಣುಗಳನ್ನು ಜಪ್ತ ಮಾಡಿ ದಂಪಿಂಗ್ ಆಡಲ್ಲಿ ನಾಶಪಡಿಸಲಾಯಿತು


ಈ ಸಂದರ್ಭದಲ್ಲಿ 10890 ಕೆ.ಜಿ. ತೂಕದ ಬಾಳೆ ಹಣ್ಣನ್ನು ನಾಶಪಡಿಸಲಾಗಿದ್ದು, ಅಂದಾಜು ಮೊತ್ತ 8,71,200 ರೂ. ಆಗಿದೆ.





Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article