ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ: ಕೃಷಿ ಹಾನಿ

ಚಾರ್ಮಾಡಿಯಲ್ಲಿ ಕಾಡಾನೆ ಹಾವಳಿ: ಕೃಷಿ ಹಾನಿ


ಉಜಿರೆ: ಚಾರ್ಮಾಡಿ ಗ್ರಾಮದ ಮಠದ ಮಜಲು ಎಂಬಲ್ಲಿ ಅನಂತ ರಾಮ ರಾವ್ ಎಂಬವರ ಅಡಿಕೆ ತೋಟಕ್ಕೆ ಶನಿವಾರ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು 50ಕ್ಕಿಂತ ಅಧಿಕ ಅಡಕೆ ಮರ, 10 ತೆಂಗಿನ ಮರ ಹಾಗೂ ಅಪಾರ ಪ್ರಮಾಣದಲ್ಲಿ ಬಾಳೆ ಕೃಷಿಯನ್ನು ನಾಶ ಮಾಡಿವೆ.

ಮಠದ ಮಜಲು ಪರಿಸರ ಚಾರ್ಮಾಡಿ ಅರಣ್ಯದ ಅಂಚಿನಲ್ಲಿದ್ದು ಸುತ್ತಮುತ್ತಲ ಪ್ರದೇಶಗಳಲ್ಲಿ ಕಾಡಾನೆಗಳು ಆಗಾಗ ದಾಳಿ ನಡೆಸುತ್ತಿವೆ. ಅಲ್ಲಿಯ ತೋಟಗಳಲ್ಲಿ ಕಾಡಾನೆಗಳು ದಾಳಿ ನಡೆಸುವ ವೇಳೆ ಅಪಾರ ಪ್ರಮಾಣದಲ್ಲಿ ಕೃಷಿಹಾನಿ ಉಂಟು ಮಾಡುತ್ತಿವೆ. ಪರಿಸರದಲ್ಲಿ ಕಾಡಾನೆ ಹಾವಳಿಗೆ ಸೂಕ್ತ ಕಡಿವಾಣ ಹಾಕುವ ಅಗತ್ಯವಿದೆ ಎಂದು ಸ್ಥಳೀಯ ಕೃಷಿಕ ಪ್ರಕಾಶ ನಾರಾಯಣ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article