ಬೆಳ್ತಂಗಡಿಯಲ್ಲಿ ಮಳೆ: ಜಿಲ್ಲಾಧಿಕಾರಿ ಭೇಟಿ
Monday, August 3, 2026
ಬೆಳ್ತಂಗಡಿ: ತಾಲೂಕಿನದ್ಯಾಂತ ಮಳೆ ಆರ್ಭಟ ಮುಂದುವರಿದಿದ್ದು, ಆ.1 ರಂದು ಸುರಿದ ಕುಂಭದ್ರೋಣ ಮಳೆಗೆ ತಾಲೂಕಿನ ನಾನಾ ಕಡೆಗಳಲ್ಲಿ ಸಪರ್ಕ ಕಡಿತ, ಗುಡ್ಡ ಕುಸಿತ, ತೋಟ, ಮನೆಗಳು ಜಲಾವೃತಗೊಂಡು ಹಾನಿಯಾದ ಹಿನ್ನೆಲೆ ದ.ಕ. ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ಆ.3 ರಂದು ಬೆಳ್ತಂಗಡಿ ತಾಲೂಕಿನ ಲಾಯಿಲ ಮತ್ತು ಮುಂಡಾಜೆ ಗ್ರಾಮಗಳಿಗೆ ಭೇಟಿ ನೀಡಿದರು.
ದೇಶದಲ್ಲಿ ಅತೀ ಹೆಚ್ಚು ಮಳೆಯಾದ ಎರಡನೇ ಸ್ಥಳ ಮುಂಡಜೆ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದ ಹಾನಿಗೀಡಾದ ಪ್ರದೇಶವನ್ನು ಪರಿಶೀಲನೆ ನಡೆಸಿದರು.
ದ.ಕ. ಜಿಲ್ಲಾಧಿಕಾರಿ ಜೊತೆಯಲ್ಲಿ ಬೆಳ್ತಂಗಡಿ ತಹಶೀಲ್ದಾರ್ ಎಸ್.ಎನ್. ನರಗುಂದ, ಬೆಳ್ತಂಗಡಿ ಕಂದಾಯ ನಿರೀಕ್ಷಕ ರಾಜು ಲಮಾಣಿ, ಲಾಯಿಲ ಪಿಡಿಒ ತಾರಾನಾಥ್ ನಾಯ್ಕ್, ಲಾಯಿಲ ಗ್ರಾಮ ಆಡಳಿತಾಧಿಕಾರಿ ರನಿತಾ, ಮುಂಡಾಜೆ ಪಿಡಿಒ ಗಾಯತ್ರಿ, ಇಂಜಿನಿಯರ್ ಸಂದೀಪ್, ಪಿ.ಆರ್.ಡಿ.ಇ.ನ ಎಇಇ ಜನಾರ್ಧನ್ ಹಾಗೂ ಮತ್ತಿತರ ಅಧಿಕಾರಿಗಳು ಇದ್ದರು.