ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಮೆದುಳಿನ ರಕ್ತಸ್ರಾವಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಮೆದುಳಿನ ರಕ್ತಸ್ರಾವಕ್ಕೆ ಯಶಸ್ವಿ ಶಸ್ತ್ರಚಿಕಿತ್ಸೆ


ಉಜಿರೆ:  ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲಿ ಖ್ಯಾತ ನರ ರೋಗ ಶಸ್ತ್ರಚಿಕಿತ್ಸಾತಜ್ಞ ಡಾ. ಅರುಣ್ ಕುಮಾರ್ ಪ್ರತಿದಿನ ಲಭ್ಯವಿದ್ದು, ಇವರು ಮತ್ತು ಇಲ್ಲಿನ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಅವರು, ಡಾ. ಡಿ. ವೀರೇಂದ್ರ ಹೆಗ್ಗಡೆಯವರಲ್ಲಿ ನ್ಯೂರೋ ಸರ್ಜರಿಗೆ ಬೇಕಾದ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿನಂತಿಸಿಕೊಂಡಾಗ ತಕ್ಷಣವೇ ಸ್ಪಂದಿಸಿ  ಇದಕ್ಕಾಗಿ 1.23 ಕೋಟಿ ರೂಪಾಯಿ ಖರ್ಚು ಮಾಡಿರುತ್ತಾರೆ. ಈ ಸೌಲಭ್ಯಗಳಿಂದ ಕಳೆದ ಒಂದು ತಿಂಗಳಲ್ಲಿ ನರರೋಗಕ್ಕೆ ಸಂಬಂಧಿಸಿದ ಸಾಮಾನ್ಯ ಶಸ್ತ್ರಚಿಕಿತ್ಸೆಗಳಲ್ಲದೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳಾದ ಮೆದುಳಿನ ಶಸ್ತ್ರಚಿಕಿತ್ಸೆ ಮತ್ತು ಒಂದು ಬೆನ್ನುಹುರಿಯ ಶಸ್ತ್ರಚಿಕಿತ್ಸೆಗಳನ್ನು ಇಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.

ಮೆದುಳಿನ ರಕ್ತಸ್ರಾವಕ್ಕೆ ಶಸ್ತ್ರಚಿಕಿತ್ಸೆ..

58 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಕೆಲವು ದಿನಗಳಿಂದ ತಲೆತಿರುಗುವಿಕೆ, ಮೈಕೈಯಲ್ಲಿ ಸಾಮಾನ್ಯ ದೌರ್ಬಲ್ಯ, ವಾಂತಿ ಮತ್ತು ತೊದಲು ಮಾತು. ಎಡಗಾಲಿನ ದೌರ್ಬಲ್ಯದೊಂದಿಗೆ ಉಜಿರೆ ಎಸ್.ಡಿಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಡಾ. ಅರುಣ್.ಎಸ್ ಇವರು ರೋಗಿಯನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿದಾಗ ಮೆದುಳಿನ ಒಳಗೆ ದ್ರವ ತುಂಬಿದ ಜಾಗದಲ್ಲಿ ರಕ್ತಸ್ರಾವವಾಗುತ್ತಿದ್ದು, ಮೆದುಳಿನ ನೀರು ಹರಿಯುವಿಕೆಗೆ ಅಡಚಣೆಯಾಗಿರುವುದು ಕಂಡು ಬಂದಿತ್ತು. ಇದರಿಂದ ರೋಗಿಯ ಪ್ರಜ್ಞೆ ಕಡಿಮೆಆಗುತ್ತಿದ್ದು, ಸ್ಥಿತಿ ಗಂಭೀರವಾಗುತ್ತಿದುದರಿಂದ ತಕ್ಷಣವೇ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು.

ಓಮಯಾರಿಸರ್ವಾಯರ್ ಎಂಬ ಸಣ್ಣಉಪಕರಣವನ್ನು ಬಳಸಿ ಯಶಸ್ವಿಯಾಗಿ ಮೆದುಳಿನಲ್ಲಿ ಸಂಗ್ರಹವಾಗಿದ್ದ ಹೆಚ್ಚುವರಿ ದ್ರವ ಮತ್ತು ರಕ್ತವನ್ನು ತೆಗೆಯಲಾಯಿತು. ರೋಗಿಯ ಆರೋಗ್ಯದಲ್ಲಿಉತ್ತಮ ಚೇತರಿಕೆ ಕಂಡುಬಂದಿದ್ದು, ರಕ್ತದೊತ್ತಡ ಮತ್ತು ಇತರ ದೈಹಿಕ ತೊಂದರೆಗಳು ನಿಯಂತ್ರಣಕ್ಕೆ ಬಂದ ಬಳಿಕ ರೋಗಿಯನ್ನು ಬಿಡುಗಡೆ  ಮಾಡಲಾಯಿತು, ಪ್ರಸ್ತುತ ರೋಗಿಯು ಆರೋಗ್ಯವಂತರಾಗಿದ್ದಾರೆ ಎಂದು ಅರುಣ್.ಎಸ್ ತಿಳಿಸಿದರು.

ಆಸ್ಪತ್ರೆಯಲ್ಲಿ ನ್ಯೂರೋ ಪರೀಕ್ಷೆಗಾಗಿ ಸಿಟಿ ಸ್ಕ್ಯಾನ್ ವ್ಯವಸೆ ಇದ್ದು, ಅತ್ಯಾಧುನಿಕ ಎಐ ಆಧಾರಿತ ಸೀಮೆನ್ಸ್ ಎಂ.ಆರ್.ಐಸ್ಕ್ಯಾನ್ ಕೂಡ ಇತ್ತೀಚೆಗೆ ಅಳವಡಿಸಲಾಗಿದೆ.ಇದಲ್ಲದೆ ನ್ಯೂರೋ ಸರ್ಜರಿಗಾಗಿ ಮಾಡ್ಯುಲರ್ ಓಟಿ, ಶಸ್ತ್ರಚಿಕಿತ್ಸೆಗೆ ಅವಶ್ಯಕವಾದ ಅತ್ಯಾಧುನಿಕ ಮೈಕ್ರೋಸ್ಕೋಪಿ, ಕ್ಯೂಸಾಯಂತ್ರ ಮತ್ತು ಡ್ರಿಲ್ ಯಂತ್ರಗಳಿವೆ. ನ್ಯೂರೋ ತಜ್ಞ ವೈದ್ಯರು, ಅನುಭವಿ ಅರೆವಳಿಕೆ ತಜ್ಞರು ಮತ್ತು ಓಟಿ, ಐಸಿಯು ತಂತ್ರಜ್ಞರು ಹಾಗೂ ನುರಿತ ದಾದಿಯರ ತಂಡವನ್ನು ಹೊಂದಿದೆ. ಇದರಿಂದ ಬಹಳ ಮುಖ್ಯವಾದ ನ್ಯೂರೋ ಸರ್ಜರಿ ನಡೆಸಲು ಬೇಕಾಗಿರುವಎಲ್ಲಾ ಸೌಲಭ್ಯಗಳನ್ನು ಈ ಆಸ್ಪತ್ರೆ ಹೊಂದಿದೆ. 

ಡಾ. ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಡಿ. ಹರ್ಷೇಂದ್ರಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರಕುಮಾರ್ ಇವರ ಪ್ರೋತ್ಸಾಹ ಮತ್ತು ಮಾರ್ಗದರ್ಶನದಲ್ಲಿ ಹಲವಾರು ಯಶಸ್ವಿ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article