ಯುವಕ ನೇಣು ಬಿಗಿದು ಆತ್ಮಹತ್ಯೆ

ಯುವಕ ನೇಣು ಬಿಗಿದು ಆತ್ಮಹತ್ಯೆ

ಉಳ್ಳಾಲ: ಅವಿವಾಹಿತ ಯುವಕನೋರ್ವ ಮನೆಯ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ‌ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಸರಕಾರಿ ಶಾಲಾ ಬಳಿ ನಡೆದಿದೆ.

ನಿತಿನ್ ಕುಮಾರ್ ಯಾನೆ ನೀತು (35) ಆತ್ಮಹತ್ಯೆಗೈದ ಯುವಕ.

ಮೂಲತ: ಕೋಟೆಕಾರು ಪಟ್ಟಣದ ಕೊಂಡಾಣ, ಮಿತ್ರನಗರ ನಿವಾಸಿಯಾಗಿರುವ ನಿತಿನ್ ಪಿಲಾರುವಿನ ಬಾವನ ಮನೆಯಲ್ಲಿ ವಾಸವಿದ್ದರು.

ತೊಕ್ಕೊಟ್ಟು ಕಾಪಿಕಾಡುವಿನ ಕ್ಯಾಟರಿಂಗ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಅವರು  ಕಳೆದ ಕೆಲವು ದಿನಗಳಿಂದ ಜ್ವರ ಭಾದೆಯಿಂದ ಮನೆಯಲ್ಲೇ ಉಳಿದಿದ್ದರು. 

ಮಂಗಳವಾರ ರಾತ್ರಿ ಊಟ ಮಾಡಿದ ಬಳಿಕ ಅವರು ಆತ್ಮಹತ್ಯೆ ಗೈ ದಿದ್ದಾರೆ ಎಂದು ತಿಳಿದು ಬಂದಿದೆ.

ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article