ಬಾವಿಯ ರಾಡಿಗೆ ನೇಣುಬಿಗಿದು ಯುವಕ ಆತ್ಮಹತ್ಯೆ

ಬಾವಿಯ ರಾಡಿಗೆ ನೇಣುಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ತಾಲೂಕಿನ ಕಾವಳ ಮೂಡೂರು ಗ್ರಾಮದಲ್ಲಿ ಯುವಕನೋರ್ವಬಾವಿಗೆ ಅಡ್ಡಲಾಗಿ ಹಾಕಿದ ಕಬ್ಬಿಣದ ರಾಡಿನಲ್ಲಿ ನೈಲಾನ್ ಹಗ್ಗ ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕಾವಳ ಮೂಡೂರಿನ ಗಂಗಯ್ಯ ಎಂಬವರ ಪತ್ರ ಯಶವಂತ (23) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.

10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ಈತ ಕೂಲಿಕೆಲಸ ಮಾಡಿಕೊಂಡಿದ್ದನೆನ್ನಲಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದ. ಬಳಿಕ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು, ಇತ್ತೀಚೆಗೆ ಊರಿಗೆ ಬಂದು ಟ್ಯೂಶನ್‌ಗೆ ಸೇರಿ ವಿದ್ಯಭ್ಯಾಸವನ್ನು ಮುಂದುವರಿಸಿದ್ದನೆನ್ನಲಾಗಿದೆ.

ಗುರುವಾರ ಬೆಳಗ್ಗೆ ದೇವಸ್ಯಮುಡೂರು ಗ್ರಾಮದ ಕೊಡೊಟ್ಟು ಎಂಬಲ್ಲಿರುವ ಸಂಬಂಧಿಕರಮನೆಗೆ ತೆರಳಿದ್ದ ವೇಳೆ ಬಾವಿಯ ನೀರು ತೆಗೆಯಲೆಂದು ಅಳವಡಿಸಲಾದ ಕಬ್ಬಿಣದ ರಾಡಿಗೆ ನೈಲಾನ್ ಹಗ್ಗವನ್ನು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥತಿಯಲ್ಲಿ ಪತ್ತೆಯಾಗಿದ್ದಾನೆ.

ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article