ರಸ್ತೆ ಬದಿ ತಡೆಗೋಡೆಗೆ ಸ್ಕೂಟಿ ಢಿಕ್ಕಿ: ಸವಾರ ಮೃತ್ಯು

ರಸ್ತೆ ಬದಿ ತಡೆಗೋಡೆಗೆ ಸ್ಕೂಟಿ ಢಿಕ್ಕಿ: ಸವಾರ ಮೃತ್ಯು

ಬಂಟ್ವಾಳ: ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ರಾ.ಹೆ.ಯ ತುಂಬೆ ರಾಮಲ್ ಕಟ್ಟೆ ಎಂಬಲ್ಲಿರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಡೈಮಂಡ್ ಶಾಲೆಯ ಉಪ ಪ್ರಾಂಶುಪಾಲ ಅನಿಲ್ ಎಸ್. ನಾಯಕ್ (72) ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ  ನಡೆದಿದೆ.

ಅನಿಲ್ ಎಸ್. ನಾಯಕ್ ಅವರು ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದಾಗನಿಯಂತ್ರಣ ತಪ್ಪಿ ಸ್ಕೂಟಿಯಲ್ಲಿ ರಾಮಲ್ ಕಟ್ಟೆ ಸಮೀಪ ರಸ್ತೆಯ ಎಡಬದಿಯಲ್ಲಿದ್ದ ತಡೆಗೋಡೆಗೆ ಢಿಕ್ಕಿ ಹೊಡೆದಿದೆಯೆನ್ನಲಾಗಿದೆ. ಪರಿಣಾಮ ಗಂಭೀರಗಾಯಗೊಂಡಿದ್ದ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article