ಗೂಂಡಾ ಕಾಯ್ದೆ ರದ್ದುಗೊಳಿಸಿ, ಡಾ.ಭಡ್‌ಗೆ ನೋಟಿಸ್ ಜಾರಿಗೊಳಿಸಿ ತೊಂದರೆ ನೀಡದಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ

ಗೂಂಡಾ ಕಾಯ್ದೆ ರದ್ದುಗೊಳಿಸಿ, ಡಾ.ಭಡ್‌ಗೆ ನೋಟಿಸ್ ಜಾರಿಗೊಳಿಸಿ ತೊಂದರೆ ನೀಡದಂತೆ ಆಗ್ರಹಿಸಿ ರಾಜ್ಯಪಾಲರಿಗೆ ಮನವಿ


ಬಂಟ್ವಾಳ: ತಾಲೂಕಿನ ಇರಾಕೋಡಿ ಎಂಬಲ್ಲಿ ಕಳೆದ ವರ್ಷ ನಡೆದ ಕೊಳತ್ತಮಜಲು ನಿವಾಸಿ ಅಬ್ದುಲ್ ರೆಹಮಾನ್ ಹತ್ಯಾ ಪ್ರಕರಣದಲ್ಲಿ ಕಾನೂನಿನ ದುರುಪಯೋಗವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಆರೋಪಿಯಾಗಿ ಗುರುತಿಸಲಾದ ಭರತ್ ಕುಮ್ಡೆಲು ಸಹಿತ ಆರು ಮಂದಿಯ ವಿರುದ್ಧ ದಾಖಲಿಸಲಾದ ಗೂಂಡಾ ಕಾಯ್ದೆ ರದ್ದುಪಡಿಸಬೇಕು, ಈ ಪ್ರಕರಣದಲ್ಲಿ ಆರ್‌ಎಸ್‌ಎಸ್‌ನ ಹಿರಿಯರಾದ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರಿಗೆ ವಿಚಾರಣೆಯ ನೆಪದಲ್ಲಿ ನೋಟಿಸ್ ಜಾರಿಗೊಳಿಸಿ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುವ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್ ಅವರ ಮೂಲಕ ರಾಜ್ಯಪಾಲರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.

ಪುನೀತ್ ಕೆರೆಹಳ್ಳಿ ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಪರಿಶೀಲಿಸಿ, ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ತುರ್ತುಅಗಿ ಮಧ್ಯಪ್ರವೇಶಿಸ ಬೇಕು, ರೆಹಮಾನ್ ಹತ್ಯಾ ಪ್ರಕರಣದಲ್ಲಿ ಕಾನೂನಿನ ದುರುಪಯೋಗವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಕೋಕಾ ಕಾಯ್ದೆಯಲ್ಲಿ ಜಾಮೀನು ಮಂಜೂರಾದ ಬಳಿಕ ಜೈಲಿನಿಂದ ಹೊರಬಾರದಂತೆ ಭರತ್ ಕುಮ್ಡೆಲು ಮತ್ತು ಆರು ಮಂದಿಯ ವಿರುದ್ಧ ದಾಖಲಿಸಲಾಗಿರುವ ಗೂಂಡಾ ಕಾಯ್ದೆಯನ್ನು ರದ್ದುಪಡಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಸೂಚನೆ ನೀಡಬೇಕು, ಆರ್‌ಎಸ್‌ಎಸ್‌ನ ಹಿರಿಯರಾದ ಕಲ್ಲಡ್ಕ ಡಾ. ಪ್ರಭಾಕರ್ ಭಟ್ ಅವರಿಗೆ ವಿಚಾರಣೆ ನೆಪದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸರು ನೋಟಿಸ್ ಜಾರಿಗೊಳಿಸಿರುವ ವಿಚಾರ ಮಾಧ್ಯಮಗಳ ಮೂಲಕ ತಿಳಿದು ಬಂದಿದ್ದು, ವಯೋವೃದ್ಧರು, ಧಾರ್ಮಿಕ, ಸಾಮಾಜಿಕ ಮುಖಂಡರಾದ ಅವರನ್ನು ಈ ಪ್ರಕರಣದಲ್ಲಿ ಸಿಲುಕಿಸಿ, ತೊಂದರೆ ಕೊಡುವ ಕ್ರಮವನ್ನು ಕೈಬಿಡುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡುವಮನತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಶ್ರೀ ಶಿವಾನಂದ ಸರಸ್ವತಿ ಮುಳಿಯ, ಸಂಸ್ಕಾರ ಭಾರತಿ ಜಿಲ್ಲಾ ಗೌರವಾಧ್ಯಕ್ಷ ಅಶೋಕ್ ಶೆಟ್ಟಿ ಸರಪಾಡಿ, ಪ್ರಮುಖರಾದ ಎಂ. ಸೋಮಪ್ಪ ಬಂಗೇರ ಬಿ.ಸಿ.ರೋಡು, ಶೇಖರ ಕೊಟ್ಟಾರಿ ಅಮ್ಟೂರು, ಪ್ರಣಾವ್ ಮಲ್ಯ, ಸದಾಶಿವ ಗೋಳ್ತಮಜಲು, ಪ್ರೀತನ್ ಗೋಳ್ತಮಜಲು, ಅಭಿಷೇಕ್ ಗೋಳ್ತಮಜಲು, ಶ್ರೀವತ್ಸ ಗೋಳ್ತಮಜಲು, ಮನೋಜ್ ಗೋಳ್ತಮಜಲು, ರಾಧಾಕೃಷ್ಣ, ವಿಜಿತ್, ರಂಜಿತ್, ಶಿವಶಂಕರ್, ರಾಧಾಕೃಷ್ಣ ಅಡ್ಯಂತಾಯ, ಗುರುರಾಜ್ ಬಂಟ್ವಾಳ, ಸೋಮನಾಥ ಬಂಟ್ವಾಳ, ಕೆ. ರಾಜರಾಮ್ ಐತಾಳ್ ಮತ್ತಿತರರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article