ಮಂಚಿ ಕೊಲ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ‘ಸುವರ್ಣ ಸಂಭ್ರಮಕ್ಕೊಂದು ಮುನ್ನುಡಿ’ ಕಾರ್ಯಕ್ರಮ

ಮಂಚಿ ಕೊಲ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ‘ಸುವರ್ಣ ಸಂಭ್ರಮಕ್ಕೊಂದು ಮುನ್ನುಡಿ’ ಕಾರ್ಯಕ್ರಮ


ಬಂಟ್ವಾಳ: ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಮಂಚಿ ಕೊಲ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ‘ಸುವರ್ಣ ಸಂಭ್ರಮಕ್ಕೊಂದು ಮುನ್ನುಡಿ’ ಎನ್ನುವ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು.

ಸುವರ್ಣ ಸಂಭ್ರಮದ ಪೂರ್ವಭಾವಿಯಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ, ಉದ್ಯಮಿ ಲಯನ್ ಸತೀಶ್ ಆಳ್ವ ಇರಾ ಬಾಳಿಕೆ ಅವರು ಕಾಮಗಾರಿಗೆ ಶಿಲಾನ್ಯಾಸಗೈದು, ನಾಲ್ಕು ದಶಕಗಳ ಹಿಂದೆ ಕೊಳ್ನಾಡು ಗ್ರಾಮದಲ್ಲಿ ಸರಕಾರಿ ಪ್ರೌಢಶಾಲೆಯೊಂದು ಸ್ಥಾಪನೆಯಾಗಲು ಪರಿಸರದ ಅನೇಕ ಹಿರಿಯರು ಕಾರಣಕರ್ತರಾಗಿದ್ದು, ಇಲ್ಲಿ ಕಲಿತಿರುವ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿದ್ದಾರೆ. ಶಾಲೆಯ ಸುವರ್ಣ ಮಹೋತ್ಸವದ ಈ ಸಂಭ್ರಮದಲ್ಲಿ ಎಲ್ಲರೂ ಸಹಭಾಗಿಗಳಾಗಬೇಕು ಎಂದರು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಲಾ ಹಿರಿಯ ವಿದ್ಯಾರ್ಥಿ, ಉದ್ಯಮಿ ಮಾಧವ ಮಾವೆ ಮಾತನಾಡಿ, ಸುವರ್ಣ ಸಂಭ್ರಮಕ್ಕೆ ಮುನ್ನುಡಿ ಬರೆದ ಈ ಸಂದರ್ಭ  ತಾವು ಕಲಿತ ಶಾಲೆಯ ಋಣವನ್ನು ತೀರಿಸುವ ಅವಕಾಶವಾಗಿ ಮೂಡಿಬಂದಿದೆ. ಈ ಶಾಲೆಯ ಆಶೋತ್ತರಗಳನ್ನು ಈಡೇರಿಸುವಲ್ಲಿ ನಾವೆಲ್ಲ ಕಟಿ ಬದ್ಧರಾಗಬೇಕು ಎಂದರು.

ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷೆ ಡಾ. ಮಮತಾ ಪಿ. ಶೆಟ್ಟಿ ಮಾತನಾಡಿ, ಈ ಶಾಲೆಯಲ್ಲಿ ಕಂಡ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರಲ್ಲದೆ ಈ ಶಾಲೆಗೆ ಶ್ರಮಿಸಿರುವ ಎಲ್ಲರೂ ನಮಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.

ಈ ಸಂದರ್ಭ ಇವರು ಸವಿನೆನಪಿಗೆ ಹಣ್ಣಿನ ಗಿಡವನ್ನು ನೆಡಲಾಯಿತು.

ಹಿರಿಯ ವಿದ್ಯಾರ್ಥಿ, ಉದ್ಯಮಿ ವೆಂಕಟೇಶ್ ನಾಯ್ಕ್ ನಿರ್ಬೈಲು ಕೊಡುಗೆಯಾಗಿ ನಿರ್ಮಿಸಿಕೊಟ್ಟ ತರಗತಿ ಕೊಠಡಿಯ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ವಿಶ್ವನಾಥ ನಾಯ್ಕ ನಿರ್ಬೈಲು ಅವರು ನೆರವೇರಿಸಿ ಶಾಲೆಗೆ ಹಸ್ತಾಂತರಿಸಿದರು. ಶಾಲಾ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಎಂಆರ್‌ಪಿಎಲ್ ಸಂಸ್ಥೆಯ ಅನುದಾನದಿಂದ ಕೊಡಮಾಡಿದ ಸೋಲಾರ್ ವಿದ್ಯುತ್ ಘಟಕವನ್ನು ಹಿರಿಯ ವಿದ್ಯಾರ್ಥಿ, ಉದ್ಯಮಿ ಚಂದ್ರಹಾಸ ರೈ ಬಾಲಾಜಿಬೈಲು ಉದ್ಘಾಟಿಸಿದರು. ಸೋಲಾರ್ ಸಂಸ್ಥೆಯ ಪ್ರತಿನಿಧಿ ರವೀನ್ ಅವರನ್ನು ಸನ್ಮಾನಿಸಲಾಯಿತು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪ್ಪ ಬಿ.ಎಲ್. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸುವರ್ಣ ಮಹೋತ್ಸವ ಕಟ್ಟಡ ನಿರ್ಮಾಣ ಸಮಿತಿಯ ಪದಾಧಿಕಾರೊಗಳಾದ  ಸತೀಶ್ ಕುಮಾರ್ ಆಳ್ವ, ಡಾ. ಮಮತಾ ಪಿ. ಶೆಟ್ಟಿ, ಸುಲೈಮಾನ್ ಜಿ. ಸುರಿಬೈಲು, ಮ್ಯಾಕ್ಸಿಮ್ ಫರ್ನಾಂಡಿಸ್, ಲಯನ್ ಉಮಾನಾಥ ರೈ ಮೇರಾವು, ಸುರೇಖಾ ಡಿ. ಶೆಟ್ಟಿ, ಹರಿಪ್ರಸಾದ್ ಕುಲಾಲ್ ನಾರ್ಶ, ರಮಾನಂದ ನೂಜಿಪ್ಪಾಡಿ ಅವರಿಗೆ ಸಾಕ್ಷಿ ಪತ್ರ ಹಸ್ತಾಂತರಿಸಲಾಯಿತು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಶಂಕರ್ ರಾವ್ ಸಭಾಧ್ಯಕ್ಷತೆ ವಹಿಸಿದ್ದರು. 

ಡಾ. ಗೋಪಾಲಾಚಾರ್ ಮಂಚಿ, ರಮೇಶ್ ರಾವ್ ಪತ್ತುಮುಡಿ, ದಿವಾಕರ ಕುಂಟೂರು, ಡಾ. ನಾಗವೇಣಿ ಮಂಚಿ, ಹಿರಿಯ ವಿದ್ಯಾರ್ಥಿ ದೇವಕಿ ಎಚ್., ಗಣೇಶ್ ಪ್ರಭು, ಎಂ.ಡಿ. ಮಂಚಿ, ಯಶೋಧ ಬಿ. ಶೆಟ್ಟಿ, ಉಮ್ಮರ್ ಕುಂಞ ಸಾಲೆತ್ತೂರು, ರಮೇಶ ಟೈಲರ್ ಕೋಕಳ, ಹನೀಫ್ ಮಂಚಿ, ಜಯಂತ ಕುಕ್ಕಾಜೆ, ಇಬ್ರಾಹಿಂ ಮಂಚಿ ಮೊದಲಾದವರಿದ್ದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ಸ್ವಾಗತಿಸಿದರು. ಮುಖ್ಯೋಪಾಧ್ಯಾಯರಾದ ಸುಶೀಲ ವಿಟ್ಲ ಪ್ರಸ್ತಾವನೆಗೈದರು. ಶಿಕ್ಷಕಿ ಶಾಂತ ಎಸ್. ವಂದಿಸಿದರು. ತಾರಾನಾಥ್ ಕೈರಂಗಳ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article