ಫೆ.18-28: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ, ಮನವಿ ಪತ್ರ ಬಿಡುಗಡೆ

ಫೆ.18-28: ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ, ಮನವಿ ಪತ್ರ ಬಿಡುಗಡೆ


ಕಾರ್ಕಳ: ಪುರಾತನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳು, ಬೌಗೋಳಿಕ ವೈವಿಧ್ಯತೆಗಳಿಂದ ಕೂಡಿರುವ ಕಾರ್ಕಳ ಪವಿತ್ರ ನೆಲ. ಇಲ್ಲಿ 2027 ಫೆಬ್ರವರಿಯಲ್ಲಿ ನಡೆಯಲಿರುವ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ವಿಜ್ರಂಭಣೆಯಿಂದ ನೆರವೇರಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿನಿತ್ಯ ತಯಾರಿ ನಡೆಯಲಿ ಎಂದು ಏಲಾಚಾರ್ಯ 108 ಶ್ರೀ ಪ್ರಸಂಗಸಾಗರ ಮುನಿಮಹಾರಾಜರು ಆಶಿಸಿದರು.

ಅವರು ಸೆ.25 ರಂದು ಮಹಾಮಸ್ತಕಾಭಿಷೇಕ ಕಾರ್ಯಾಲಯದಲ್ಲಿ ಮಹೋತ್ಸವದ ಮನವಿ ಪತ್ರ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, 12 ವರ್ಷಕ್ಕೊಮ್ಮೆ ಜರುಗುವ ಮಸ್ತಕಾಭಿಷೇಕ ವೈಭವದಿಂದ ನೆರವೇರಬೇಕು. ಕಾರ್ಯಕ್ರಮ ಯಶಸ್ವಿ ನಿಟ್ಟಿನಲ್ಲಿ ಸರ್ವರ ಸಹಕಾರ ಅವಶ್ಯವೆಂದರು.

ಮಹಾಮಸ್ತಕಾಭಿಷೇಕ ಸಮಿತಿ ಉಪಾಧ್ಯಕ್ಷ ಪಡುಬಿದಿರೆ ರತ್ನಾಕರರಾಜ್ ಅರಸರು, ಅನಂತ್ರಾಜ ಪೂವಾಣಿ, ಪೆರಿಂಜೆ ಜೀವಂಧರ್ ಕುಮಾರ್ ಉಪಸ್ಥಿತರಿದ್ದರು. 

ಸಮಿತಿ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಸ್ವಾಗತಿಸಿ, ಡಾ. ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಕೋಶಾಧಿಕಾರಿ ಮೋಹನ್ ಪಡಿವಾಳ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article