ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘಕ್ಕೆ ರೂ.1.07 ಕೋಟಿ ಲಾಭ: ಸದಸ್ಯರಿಗೆ ಶೇ.22 ಡಿವಿಡೆಂಡ್

ದಕ್ಷಿಣ ಕನ್ನಡ ಸಹಕಾರಿ ನೌಕರರ ಸಹಕಾರ ಸಂಘಕ್ಕೆ ರೂ.1.07 ಕೋಟಿ ಲಾಭ: ಸದಸ್ಯರಿಗೆ ಶೇ.22 ಡಿವಿಡೆಂಡ್


ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಆರ್ಥಿಕ ಶ್ರೇಯೋಭಿವೃದ್ಧಿಗೆ ಪೂರಕವಾಗಿರುವ ದಕ್ಷಿಣ ಕನ್ನಡ ಸಹಕಾರಿ  ನೌಕರರ ಸಹಕಾರ ಸಂಘವು  2025-26ನೇ ಸಾಲಿನಲ್ಲಿ ರೂ.1.07 ಕೋಟಿ  ಲಾಭ ಗಳಿಸಿ, ಸದಸ್ಯರಿಗೆ ಶೇ.22ರಷ್ಟು ಡಿವಿಡೆಂಡ್ ಘೋಷಿಸಿದೆ ಎಂದು ಸಂಘದ ಅಧ್ಯಕ್ಷ ಎಸ್. ಜಗದೀಶ್ಚಂದ್ರ ಅಂಚನ್  ತಿಳಿಸಿದ್ದಾರೆ.

ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿರುವ ಸಂಘದ ಪ್ರಧಾನ ಕಚೇರಿಯ ಸಪ್ತವರ್ಣ ಸಭಾಂಗಣದಲ್ಲಿ ಶನಿವಾರ ನಡೆದ 95ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ  ಅವರು ಮಾತನಾಡಿದರು.

“ಸಂಘದ ನೌಕರ ಸದಸ್ಯರೇ ಸಂಘದ ಜೀವಾಳ.ಸದಸ್ಯರ ನಿರಂತರ ಬೆಂಬಲ ಮತ್ತು  ಪ್ರೋತ್ಸಾಹ, ಆಡಳಿತ ಮಂಡಳಿಯ ನಿರ್ದೇಶಕರ ಸಂಘಟಿತ ಕಾರ್ಯನಿರ್ವಹಣೆ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಸೇವೆಯಿಂದ ಸಂಘವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಾಧ್ಯವಾಗಿದೆ,” ಎಂದು ಅವರು ಹೇಳಿದರು.

ರೂ.199.75 ಕೋಟಿ ವ್ಯವಹಾರ:

ಸಹಕಾರ ಸಂಘಗಳ ನೌಕರ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಹಾಗೂ ಠೇವಣಿಗಳಿಗೆ ಆಕರ್ಷಕ ಬಡ್ಡಿ ನೀಡುವ ಮೂಲಕವೂ  ಸಂಘವು ವರದಿ ವರ್ಷದಲ್ಲಿ  ಕೋಟಿಗೂ ಮಿಕ್ಕಿ ಲಾಭ ಗಳಿಸಿ ಸಾರ್ವಕಾಲಿಕ ಸಾಧನೆಗೈದಿದೆ. ಸಂಘವು  ರೂ.29.16 ಲಕ್ಷ  ಪಾಲು ಬಂಡವಾಳ ಹಾಗೂ ರೂ.7.94  ಕೋಟಿ ವಿವಿಧ ನಿಧಿಗಳನ್ನು ಹೊಂದಿದೆ. ಠೇವಣಿ ಸಂಗ್ರಹಣೆಯಲ್ಲೂ ಗಮನಾರ್ಹ ಪ್ರಗತಿ ಸಾಧಿಸಿರುವ ಸಂಘದ ಠೇವಣಿ  ಮೊತ್ತವು ಹಿಂದಿನ ಸಾಲಿನ ಅಂತ್ಯದಲ್ಲಿದ್ದ ರೂ.94.33 ಕೋಟಿಯಿಂದ ರೂ.108.08 ಕೋಟಿಗೆ ಏರಿಕೆಯಾಗಿದೆ. ಸಾಲ ಮುಂಗಡ ಮೊತ್ತವೂ ರೂ.82.90 ಕೋಟಿಯಿಂದ ರೂ.91.67 ಕೋಟಿಗೆ ಹೆಚ್ಚಳವಾಗಿದೆ.ಇದರೊಂದಿಗೆ ಸಂಘದಒಟ್ಟು ವ್ಯವಹಾರವು ಹಿಂದಿನ ಸಾಲಿನ ರೂ.177.23 ಕೋಟಿಯಿಂದ ರೂ.199.75 ಕೋಟಿಗೆ ಏರಿಕೆಯಾಗಿದೆ ಎಂದು ಎಸ್.ಜಗದೀಶ್ಚಂದ್ರ  ಅಂಚನ್  ತಿಳಿಸಿದರು.

ತಾಲೂಕುವಾರು ಶಾಖೆ: 

ಸಂಘವು ಪ್ರಸ್ತುತ ನಾಲ್ಕು ಶಾಖೆಗಳನ್ನು  ಹೊಂದಿದ್ದು, ಮಂಗಳೂರಿನಲ್ಲಿ ಎರಡು,  ಉಡುಪಿ ಹಾಗೂ ಪುತ್ತೂರಿನಲ್ಲಿ ತಲಾ ಒಂದು ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಸದಸ್ಯರ  ಸಹಕಾರ ಹಾಗೂ ಸಿಬ್ಬಂದಿಯ  ಪ್ರಾಮಾಣಿಕ  ಸೇವೆಯಿಂದ ಎಲ್ಲಾ  ಶಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.ಮುಂದಿನ ದಿನಗಳಲ್ಲಿ ಸದಸ್ಯರಿಗೆ ಇನ್ನಷ್ಟು ಹತ್ತಿರವಾಗುವ ಉದ್ದೇಶದಿಂದ ತಾಲೂಕುವಾರು ಶಾಖೆಗಳನ್ನು ತೆರೆಯುವ ಯೋಜನೆ ರೂಪಿಸಲಾಗಿದೆ ಎಂದು ಅವರು  ತಿಳಿಸಿದರು.

ಸತತ 9 ಬಾರಿ ಎಸ್‌ಸಿಡಿಸಿಸಿ ಬ್ಯಾಂಕ್ ಪ್ರಶಸ್ತಿ:

ಸಂಘದ ಪ್ರಗತಿಯನ್ನು ಗುರುತಿಸಿರುವ ಎಸ್‌ಸಿಡಿಸಿಸಿ ಬ್ಯಾಂಕ್, ಕಳೆದ ಎಂಟು ವರ್ಷಗಳಿಂದ ಸತತವಾಗಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.  2017-18ರಿಂದ 2024 -25ರವರೆಗೆ ಸತತ  ಎಂಟು ಬಾರಿ ಪ್ರಶಸ್ತಿ  ಪಡೆದಿರುವ ಸಂಘವು  2025-26ನೇ ಸಾಲಿನಲ್ಲೂ ಎಸ್‌ಸಿಡಿಸಿಸಿ ಬ್ಯಾಂಕಿನ  ಸಾಧನಾ ಪ್ರಶಸ್ತಿಗೆ ಪಾತ್ರವಾಗಿದೆ. ಇದರೊಂದಿಗೆ ಸಂಘವು ಪ್ರತಿಷ್ಠಿತ ಸಾಧನಾ  ಪ್ರಶಸ್ತಿಯನ್ನು ಸತತ 9ನೇ ಬಾರಿಗೆ ಪಡೆದು ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಜಗದೀಶ್ಚಂದ್ರ ಅಂಚನ್ ತಿಳಿಸಿದರು.

‘ಸಹಕಾರ ರತ್ನ’ ಡಾ.ಎಂ.ಎನ್.ಆರ್. ಮಾರ್ಗದರ್ಶನ: 

ಸಂಘವು ನಿರಂತರವಾಗಿ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಎಸ್‌ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಸಹಕಾರ ರಂಗದ ಅಗ್ರಗಣ್ಯ ನಾಯಕರಾದ ‘ಸಹಕಾರ ರತ್ನ’ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರ ಸೂಕ್ತ ಸಲಹೆ, ಮಾರ್ಗದರ್ಶನ ಹಾಗೂ ಪ್ರೋತ್ಸಾಹವೇ ಪ್ರಮುಖ ಕಾರಣವಾಗಿದೆ. ಅವರ ದೂರದೃಷ್ಟಿಯ ನಾಯಕತ್ವದ  ಫಲವಾಗಿ  ಸಂಘವು ಕೊಡಿಯಾಲ್  ಬೈಲ್‌ನಲ್ಲಿ ಸಂಪೂರ್ಣಹವಾನಿಯಂತ್ರಿತ ಆಡಳಿತ ಕಚೇರಿ, ಶಾಖೆ ಹಾಗೂ ಎರಡು  ಸಭಾಂಗಣಗಳನ್ನು ಒಳಗೊಂಡ ಮೂರು ಮಹಡಿಯ ಸುಸಜ್ಜಿತ ‘ಉನ್ನತಿ’ ಸ್ವಂತ ಕಟ್ಟಡವನ್ನು ಹೊಂದಲು ಸಾಧ್ಯವಾಗಿದೆ. ಇದು ಸಂಘದ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಸಂಘದ ಬೆಳವಣಿಗೆಗೆ ಸದಾ  ಬೆನ್ನೆಲುಬಾಗಿ ನಿಂತಿರುವ ಡಾ. ಎಂ.ಎನ್.  ರಾಜೇಂದ್ರಕುಮಾರ್ ಅವರಿಗೆ ಸರ್ವ ಸದಸ್ಯರ ಪರವಾಗಿ ಸಂಘದ ಅಧ್ಯಕ್ಷ  ಎಸ್. ಜಗದೀಶ್ಚಂದ್ರ ಅಂಚನ್ ಇದೇ ಸಂದರ್ಭದಲ್ಲಿ  ಹೃತ್ಪೂರ್ವಕ ಕೃತಜ್ಞತೆ  ಸಲ್ಲಿಸಿದರು.

ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ:

ಸಂಘವು ಪ್ರತಿವರ್ಷ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ  ಮಾಡುವ ಸದಸ್ಯರ ಮಕ್ಕಳನ್ನು  ಗುರುತಿಸಿ  ಪ್ರತಿಭಾ ಪುರಸ್ಕಾರ ನೀಡಿ  ಪ್ರೋತ್ಸಾಹಿಸುತ್ತಿದೆ. ಈ ಬಾರಿ ಶೇ.70ಕ್ಕಿಂತ  ಅಧಿಕ ಅಂಕಗಳೊಂದಿಗೆ ತೇರ್ಗಡೆಯಾದ 47 ಪ್ರತಿಭಾನ್ವಿತ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ  ಹಾಗೂ ಪ್ರೋತ್ಸಾಹ ಧನವನ್ನು  ವಿತರಿಸಲಾಯಿತು. ಎಸ್‌ಸಿಡಿಸಿಸಿ ಬ್ಯಾಂಕಿನ  ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಕೆ. ಗೋಪಾಲಕೃಷ್ಣ ಭಟ್ ಉಪಸ್ಥಿತಿಯಲ್ಲಿ  ಪ್ರತಿಭಾ ಪುರಸ್ಕಾರ ನಡೆಯಿತು.ಸಂಘವು  ಕಳೆದ ಐದು ವರ್ಷಗಳಿಂದ ಸತತವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು  ಹಮ್ಮಿಕೊಂಡು ಬರುತ್ತಿದೆ.

ಶ್ರದ್ಧಾಂಜಲಿ: 

ಸಂಘದ ಹಿರಿಯ ಸದಸ್ಯರಾದ ಪ್ರಕಾಶ್ ಕೆ. (ಎಸ್ ಸಿಡಿಸಿಸಿ ಬ್ಯಾಂಕ್), ಬಾಲಕೃಷ್ಣ ಹೆಚ್. (ಎಸ್ ಸಿಡಿಸಿಸಿ ಬ್ಯಾಂಕ್), ರವಿಚಂದ್ರ ಶೆಟ್ಟಿ (ಹಾಪ್ ಕಾಮ್ಸ್ ) ಹಾಗೂ ಸಂಘದ ಪುತ್ತೂರು ಶಾಖೆಯ ವ್ಯವಸ್ಥಾಪಕ ರಾಮನಾಥ ಇವರು ಈಚೆಗೆ ನಿಧನರಾಗಿದ್ದು ಅವರಿಗೆ ಮಹಾಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷ ರಾಘವಆರ್. ಉಚ್ಚಿಲ್, ನಿರ್ದೇಶಕರಾದ ದಿವಾಕರ ಶೆಟ್ಟಿಕೆ., ವಿಶ್ವೇಶ್ವರ ಐತಾಳ್, ಜಯಪ್ರಕಾಶ್ ರೈ ಸಿ.,  ವಿಶ್ವನಾಥ ಕೆ.ಟಿ., ಚಂದ್ರಕಲಾ ಕೆ., ಮೋಹನ್ ಎನ್., ವಿಶ್ವನಾಥ್ ಅಮೀನ್, ಗೀತಾಕ್ಷಿ, ಕಿರಣ್ ಕುಮಾರ್ ಶೆಟ್ಟಿ,  ನಿಶಿತಾ ಜಯರಾಮ್ ಹಾಗೂ ಪ್ರೇಮ್ ರಾಜ್ ಭಂಡಾರಿ ಉಪಸ್ಥಿತರಿದ್ದರು.ಸಂಘದ ಮುಖ್ಯ  ಕಾರ್ಯನಿರ್ವಹಣಾಧಿಕಾರಿ ಸತೀಶ್ ಪೂಜಾರಿ ಸ್ವಾಗತಿಸಿ, 2025-26ನೇ ಸಾಲಿನ ವಾರ್ಷಿಕ ವರದಿ ಹಾಗೂ  ಲೆಕ್ಕ ಪತ್ರವನ್ನು ಮಂಡಿಸಿದರು. ಉಪಾಧ್ಯಕ್ಷ  ರಾಘವ  ಆರ್. ಉಚ್ಚಿಲ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article