ಸೆ.15 ರಿಂದ ರಾಮಕೃಷ್ಣ ಮಠದಲ್ಲಿ ಯೋಗಾಸನ ಶಿಬಿರ
Saturday, September 12, 2026
ಮಂಗಳೂರು: ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಇದೇ ಸೆ.15 ರಿಂದ ಸಂಜೆ 5 ಗಂಟೆಯಿಮದ 6.30ರ ವರೆಗೆ ಯೋಗಾಸನ ಶಿಬಿರ ನಡೆಯಲಿದೆ.
ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಶಿಷ್ಯರು ಯೋಗಾಸನ, ಮುದ್ರೆಗಳು, ಕ್ರಿಯೆಗಳು, ಪ್ರಾಣಾಯಾಮ, ಸೂರ್ಯನಮಸ್ಕಾರ, ಧ್ಯಾನ ಮಾಡುವ ವಿಧಾನ ತಿಳಿಸಿಕೊಡುವರು.
ಅಂತರಾಷ್ಟ್ರಿಯ ಯೋಗದಿನಾಚರಣೆಯ ಪೂರ್ವಭಾವಿ ತಯಾರಿಯ ಯೋಗಾಭ್ಯಾಸ. ಆಸಕ್ತರು ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು. ಹೆಚ್ಚಿನ ವಿವರಗಳಿಗಾಗಿ 0824-2414412 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
