8 ಮಂದಿ ಮತ್ತೆ ಜೈಲಿಗೆ: ರಾಜ್ಯ ಸರ್ಕಾರದ ಕರಾಳ ಸಂಚು

8 ಮಂದಿ ಮತ್ತೆ ಜೈಲಿಗೆ: ರಾಜ್ಯ ಸರ್ಕಾರದ ಕರಾಳ ಸಂಚು

ಮಂಗಳೂರು: ಬಂಟ್ವಾಳದ ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದಲ್ಲಿ ಮೈಸೂರಿನ ಕೋಕಾ ನ್ಯಾಯಾಲಯವು ಭರತ್ ಕುಮ್ದೇಲ್ ಸೇರಿದಂತೆ 8 ಜನರಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, ನ್ಯಾಯಾಲಯದಲ್ಲಿ ಸತ್ಯಕ್ಕೆ ಜಯ ಸಿಕ್ಕಿದ ಕೆಲವೇ ಗಂಟೆಗಳಲ್ಲಿ, ಭರತ್, ಶಿವಪ್ರಸಾದ್, ಪ್ರದೀಪ್, ರಂಜಿತ್, ಅಭಿನ್, ತೇಜಕ್ಷಾ ಅವರಿಗೆ ಮತ್ತೆ ‘ಗೂಂಡಾ ಕಾಯ್ದೆ’ ಜಾರಿ ಮಾಡಿ ವಾಪಾಸ್ ಜೈಲಿಗೆ ಅಟ್ಟಲಾಗಿದೆ!

ನ್ಯಾಯಾಲಯದ ಆದೇಶಕ್ಕೂ ಬೆಲೆ ನೀಡದೆ, ಅಲ್ಪಸಂಖ್ಯಾತರ ಓಲೈಕೆಗಾಗಿ ಹಿಂದೂ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮಾಡುತ್ತಿರುವ ಕರಾಳ ಸಂಚು ಇದು. ರಾಜ್ಯ ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯನ್ನು ಉಪಯೋಗಿಸಿ ಹಿಂದೂ ಕಾರ್ಯಕರ್ತರ ಮೇಲೆ ನಡೆಸುತ್ತಿರುವ ಈ ದೌರ್ಜನ್ಯದ ವಿರುದ್ಧ ತುಳುನಾಡಿನ ಪ್ರತಿಯೊಬ್ಬ ಹಿಂದೂವೂ ಎಚ್ಚರಗೊಳ್ಳಬೇಕಾಗಿದೆ. ಸರಕಾರದ ಹಿಂದೂ ದಮನ ನೀತಿಯ ವಿರುದ್ಧ ಬೃಹತ್ ಜನಾಂದೋಲನವನ್ನು ಹಮ್ಮಿಕೊಳ್ಳಲಿದ್ದೇವೆ ಎಂದು ವಿಶ್ವ ಹಿಂದೂ ಪರಿಷದ್‌ನ ಮುಖಂಡ ಶರಣ್ ಪಂಪ್‌ವೆಲ್ ಪ್ರಕಟಣೆಯಲ್ಲಿ ತಿಳಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article