ರಕ್ಷಿತ್ ಬಿ.ವಿ. ಅವರಿಗೆ ಪಿಹೆಚ್‌ಡಿ ಪದವಿ
Friday, September 25, 2026
ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಎಸ್‌ಡಿಎಂ ಕಾನೂನು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಕ್ಷಿತ್ ಬಿ.ವಿ. ಅವರಿಗೆ ಅರುಣಾಚಲ ಪ್ರದೇಶದ ಇಟಾನಗರದ ಹಿಮಾಲಯನ್ ವಿಶ್ವವಿದ್ಯಾನಿಲಯದಿಂದ ಕಾನೂನು ವಿಭಾಗದಲ್ಲಿ ಪಿಎಚ್‌ಡಿ (ಡಾಕ್ಟರೇಟ್) ಪದವಿ ಪ್ರಧಾನ ಮಾಡಿದೆ.
ರಕ್ಷಿತ್ ಬಿ.ವಿ. ಅವರು `Critical Analysis of the Status and Rights of Women Prisoners in India with Special Reference to Legal Protection and Reforms for Women Prisoners in the State of Karnataka' ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಪ್ರಬಂಧಕ್ಕಾಗಿ ಈ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ಈ ಸಂಶೋಧನೆಯು ಮಹಿಳಾ ಕೈದಿಗಳ ಕಾನೂನು ಚೌಕಟ್ಟು, ಮೂಲಭೂತ ಹಕ್ಕುಗಳು, ರಕ್ಷಣಾ ವ್ಯವಸ್ಥೆಗಳು ಮತ್ತು ಸಾಂಸ್ಥಿಕ ಸುಧಾರಣೆಗಳನ್ನು, ವಿಶೇಷವಾಗಿ ಕರ್ನಾಟಕ ರಾಜ್ಯದ ಪರಿಸ್ಥಿತಿಯನ್ನು ಮುನ್ನಲೆಗೆ ತಂದು ಆಳವಾಗಿ ವಿಮರ್ಶಾತ್ಮಕ ಮೌಲ್ಯಮಾಪನ ಮಾಡಿದೆ. ಅಲ್ಲದೆ, ಕಾರಾಗೃಹ ಆಡಳಿತದಲ್ಲಿ ಮಾನವೀಯತೆ, ದೃಢವಾದ ಕಾನೂನು ರಕ್ಷಣೆ ಹಾಗೂ ಅರ್ಥಪೂರ್ಣ ಪುನರ್ವಸತಿ ತಂತ್ರಗಳ ಅಗತ್ಯತೆಯನ್ನು ಈ ಪ್ರಬಂಧವು ಬಲವಾಗಿ ಒತ್ತಿಹೇಳಿದೆ. ಅವರ ಈ ಶೈಕ್ಷಣಿಕ ಸಾಧನೆಯು ಕಾರಾಗೃಹ ಕಾನೂನು, ಮಾನವ ಹಕ್ಕುಗಳು ಮತ್ತು ಕಾನೂನು ಸುಧಾರಣೆ ಕ್ಷೇತ್ರಗಳಿಗೆ ಅತ್ಯಮೂಲ್ಯ ಕೊಡುಗೆಯಾಗಿದೆ.