ಯಶಸ್ವಿ ಉದ್ಯಮಿಯಾಗಲು ಉದ್ಯಮಶೀಲತೆಯ ಪರಿಕಲ್ಪನೆ ಹಾಗೂ ಧೃಡ ಆತ್ಮವಿಶ್ವಾಸ ಅತ್ಯಗತ್ಯ: ಹರೀಶ್ ಕೆ.ಸುವರ್ಣ

ಯಶಸ್ವಿ ಉದ್ಯಮಿಯಾಗಲು ಉದ್ಯಮಶೀಲತೆಯ ಪರಿಕಲ್ಪನೆ ಹಾಗೂ ಧೃಡ ಆತ್ಮವಿಶ್ವಾಸ ಅತ್ಯಗತ್ಯ: ಹರೀಶ್ ಕೆ.ಸುವರ್ಣ


ಮಂಗಳೂರು: ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ ಸಿಡಾಕ್, ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಕೌಶಲ್ಯ ಮಿಶನ್ ಮಂಗಳೂರು ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಸಹಯೋಗದೊಂದಿಗೆ ಕಳೆದ ಹತ್ತು ದಿನಗಳಿಂದ ನಡೆಯುತ್ತೀದ್ದ  ಉದ್ಯಮಶೀಲತಾಭಿವೃದ್ಧಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸೆ.7 ರಂದು ಉರ್ವಸ್ಟೋರಿನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣರು ಮಾತನಾಡಿ, ನಾನು ಗಮನಿಸಿದಂತೆ ಅಭ್ಯರ್ಥಿಗಳು ತರಬೇತಿ ಕಾರ್ಯಗಾರದ ಆರಂಭಿಕ ದಿನಗಳಿಗಿಂತ ಈಗ ಪ್ರತಿಯೊಬ್ಬರಲ್ಲಿವು ಆತ್ಮವಿಶ್ವಾಸ ತುಂಬಿ ತುಳುಕುತ್ತಿದ್ದು, ಇವರೆಲ್ಲರಲ್ಲಿಯೂ  ಮುಂದೆ ಯಶಸ್ವಿ ಉದ್ಯಮಿ ಆಗುವ ಕನಸು ಎದ್ದು ಕಾಣುತ್ತಿದೆ ಎಂದರು. ಉದ್ಯಮಶೀಲತೆಯ ಪರಿಕಲ್ಪನೆ, ಹಣಕಾಸು ನಿರ್ವಹಣೆ, ಮಾರುಕಟ್ಟೆ ತಂತ್ರಗಳು ಹಾಗೂ ಸರಕಾರದ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳ ಬಗ್ಗೆ ಅತ್ಯುತ್ತಮವಾಗಿ ತರಬೇತಿ ನೀಡಿದ ಸಿಡಾಕ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಿಗೆ ಯುವವಾಹಿನಿ ಮಂಗಳೂರು ಘಟಕದ ಪರವಾಗಿ ಧನ್ಯವಾದ ನೀಡಿದರು.


ಭಾರತೀಯ ವಿಕಾಶ ಟ್ರಸ್ಟ್ ನ ವ್ಯವಸ್ಥಾಪಕ ಜೀವನ್ ಕೊಲ್ಯ ಅವರು, ತರಬೇತಿಗೆ ಬಂದವರೆಲ್ಲ ಉತ್ಸಾಹದಿಂದ ಕೂಡಿದ್ದು, ಇವರೆಲ್ಲರಿಗೂ ಇದೊಂದು ಯಶಸ್ವಿ ಉದ್ಯಮಿಯಾಗಲು ಉತ್ತಮ ಅವಕಾಶ ಎನ್ನುತ್ತಾ ಎಲ್ಲರಿಗೂ ಶುಭಕೋರಿದರು.

ಸಿಡಾಕ್ ಸಂಸ್ಥೆಯ ಉಪ ನಿರ್ದೇಶಕ ಶಿವಾನಂದ ಯೆಲಿಗಾರ್ ರವರು ನಮ್ಮ ಸಂಸ್ಥೆಯು ಕರ್ನಾಟಕದಾದ್ಯಂತ ಇಂತಹ ಅನೇಕ ಕಾರ್ಯಗಾರಗಳನ್ನು ನಡೆಸುತ್ತಾ ಬಂದಿದ್ದು, ಪ್ರತಿಯೊಬ್ಬರು ಸ್ವಂತ ಉದ್ಯಮಿಗಳಾಗ ಬೇಕು ಎಂಬುದೇ ನಮ್ಮ ಮುಖ್ಯ ಉದ್ದೇಶ ಎನ್ನುತ್ತಾ ನಮ್ಮ ಸಂಸ್ಥೆಯ ವತಿಯಿಂದ ಮುಂದೆಯೂ ನಿಮಗೆ ಯಾವುದೇ ಸಹಕಾರ ಬೇಕಾದಲ್ಲಿ ನಮ್ಮನ್ನು ಸಂರ್ಪಕಿಸಬಹುದು ಎಂದ ಅವರು ಇಂತಹ ಉತ್ತಮ ಜನಪರ ತರಬೇತಿ ಕಾರ್ಯಗಾರಕ್ಕೆ ಸ್ಥಳಾವಕಾಶ ನೀಡಿದ ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷರು ಹಾಗೂ ಸರ್ವಸದಸ್ಯರಿಗೆ ವಂದಿಸಿದರು.

ಕಾರ್ಯಕ್ರಮದಲ್ಲಿ ಯುವವಾಹಿನಿ ಮಂಗಳೂರು ಘಟಕದ ಕಾರ್ಯದರ್ಶಿ  ಉಷಾ.ಕೆ ಉಪಸ್ಥಿತರಿದ್ದರು. ಪ್ರವೀಷಾ ಕುಕ್ಯಾನ್ ನಿರೂಪಿಸಿದರು. ವಿದ್ಯಾ ಎಲ್ಲರಿಗೂ ವಂದಿಸಿದರು‌.

ತರಬೇತಿ ಪೂರ್ಣಗೊಳಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article