ಸಂಘರ್ಷಕ್ಕೆ ಕಾರಣವಾದ ವಿ.ವಿ. ಕಾಲೇಜು ಚುನಾವಣೆ

ಸಂಘರ್ಷಕ್ಕೆ ಕಾರಣವಾದ ವಿ.ವಿ. ಕಾಲೇಜು ಚುನಾವಣೆ

ಮಂಗಳೂರು: ಕಾಲೇಜು-ವಿಶ್ವ ವಿದ್ಯಾಲಯಗಳಲ್ಲಿ ಚುನಾವಣೆ ಪುನರಾರಂಭಕ್ಕೆ ಮೊನ್ನೆಯಷ್ಟೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಈ ನಡುವೆಯೇ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಚುನಾವಣೆ ಭಾರಿ ಸಂಘರ್ಷಕ್ಕೆ ಕಾರಣವಾಗಿದೆ. 

ಪರೋಕ್ಷ ಮತದಾನದ ಮೂಲಕ ನಡೆದಿರುವ ಚುನಾವಣೆಯಲ್ಲಿ ಎಬಿವಿಪಿ ಗೆದ್ದು ಬೀಗಿದ್ದು, ಸರ್ಕಾರದ ಆದೇಶದ ನಡುವೆ ನಡೆದಿರುವ ಈ ಚುನಾವಣೆ ಬಗ್ಗೆ ಎನ್‌ಎಸ್‌ಯುಐ ಆಕ್ಷೇಪ ತೆಗೆದಿದ್ದು, ಮಂಗಳೂರು ವಿವಿ ಕುಲಪತಿ ವಿರುದ್ಧ ಮುಖ್ಯಮಂತ್ರಿಗೆ ದೂರು ನೀಡಲೂ ಮುಂದಾಗಿದೆ.

ಇಂದು ನಡೆದ ಮಂಗಳೂರು ವಿವಿ ಕಾಲೇಜಿನ ಚುನಾವಣೆಯಲ್ಲಿ ಗೆದ್ದು ಬೀಗಿದ ಎಬಿವಿಪಿ ವಿಜಯೋತ್ಸವ ಆಚರಿಸಿದ್ದರೆ, ಇತ್ತ ಈ ಸಂಬಂಧ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ರವರಿಗೆ ದೂರು ನೀಡಲು ಎನ್‌ಎಸ್‌ಯುಐ ಸಿದ್ಧತೆ ನಡೆಸಿದೆ. ಜಿಲ್ಲಾಡಳಿತದ ಮೂಲಕ ದೂರು ಸಲ್ಲಿಸಲು ಎನ್‌ಎಸ್‌ಯುಐ ತೀರ್ಮಾನಿಸಿದ್ದು, ಸೆ.೧೮ರಂದು ಮಂಗಳೂರಿನಲ್ಲಿ ನಡೆಯಲಿರುವ ಕ್ಯಾಬಿನೆಟ್ ಸಭೆಗೆ ಸಿಎಂ ಬಂದಾಗ ಚರ್ಚೆ ನಡೆಸಲು ನಿರ್ಧರಿಸಿದೆ ಎನ್ನಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article