ಮಂಗಳೂರು ಬೀದಿ ವ್ಯಾಪಾರಿಗಳ ಹೋರಾಟ ರಾಜ್ಯಕ್ಕೆ ದಾರಿದೀಪ: ಪ್ರತಾಪ ಸಿಂಹ

ಮಂಗಳೂರು ಬೀದಿ ವ್ಯಾಪಾರಿಗಳ ಹೋರಾಟ ರಾಜ್ಯಕ್ಕೆ ದಾರಿದೀಪ: ಪ್ರತಾಪ ಸಿಂಹ


ಮಂಗಳೂರು: ಬೀದಿಬದಿ ವ್ಯಾಪಾರಿಗಳ ಮೇಲಿನ ಧಾಳಿ, ದಬ್ಬಾಳಿಕೆ ಕಾನೂನು ಬಾಹಿರವಾದದ್ದು ಶ್ರೀಮಂತರ ಅತಿಕ್ರಮಣವನ್ನು  ನಿಯಂತ್ರಿಸಲಾಗದ ಸರಕಾರ ಬಡವರ ಹೊಟ್ಟೆಯ ಮೇಲೆ ಸವಾರಿ ಮಾಡುತ್ತಿದೆ. ಬೀದಿ ವ್ಯಾಪಾರಿಗಳ ಬದುಕುವ ಹಕ್ಕು ಮತ್ತು ಪಾದಚಾರಿಗಳ ನಡೆದಾಡುವ ಹಕ್ಕುಗಳು ಎರಡೂ  ಸಂವಿಧಾನದಿಂದ ರಕ್ಷಿಸಲ್ಪಟ್ಟಿದೆ ಎಂದು ವಕೀಲರು, ಸಿಐಟಿಯು ರಾಜ್ಯ ಉಪಾಧ್ಯಕ್ಷರಾದ ಪ್ರತಾಪಸಿಂಹ ಬೆಂಗಳೂರು ಹೇಳಿದರು 


ಅವರು ಇಂದು ನಗರದ ಡಾನ್ ಬಾಸ್ಕೊ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ನೇತೃತ್ವದಲ್ಲಿ ನಡೆದ ಬೀದಿಬದಿ ವ್ಯಾಪಾರಸ್ಥರ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದರು.


ಮಂಗಳೂರು ಬೀದಿ ವ್ಯಾಪಾರಿಗಳ ಹೋರಾಟವು ರಾಜ್ಯದ ಬೀದಿ ವ್ಯಾಪಾರಿಗಳಿಗೆ ದಾರಿದೀಪ ಆಗಿದೆ ಮಂಗಳೂರಿನ ಪ್ರಕರಣವೊಂದರಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಸರಿಯಾದ ಚಾಟಿ ಬೀಸಿದೆ ಇದು ರಾಜ್ಯದ ಬೀದಿ ವ್ಯಾಪಾರಸ್ಥರಲ್ಲಿ ಆಶಾಭಾವನೆ ಮೂಡಿಸಿದೆ ಮತ್ತು ನ್ಯಾಯದ ಹುಡುಕಾಟದಲ್ಲಿದ್ದ ವ್ಯಾಪಾರಿಗಳಲ್ಲಿ ಕಾನೂನಿನ ಬಗ್ಗೆ ವಿಶ್ವಾಸ ಹುಟ್ಟಿಸಿದೆ ಎಂದು ಅವರು ಹೇಳಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ ಬಿಸಿಲು, ಚಳಿ, ಮಳೆಗೆ ಮೈಯ್ಯೊಡ್ದಿ  ದುಡಿಯುವ ಶ್ರಮ ಜೀವಿಗಳು,


ಬೀದಿ ವ್ಯಾಪಾರಿಗಳ ಮೇಲಿನ ಆಕ್ರಮಣವನ್ನು ಸಹಿಸಲಾಗದು ಎಂದು ಅವರು ಹೇಳಿದರು.

ಸಿಐಟಿಯು ಜಿಲ್ಲಾ ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ, ಸುಕುಮಾರ್ ತೊಕ್ಕೊಟ್ಟು, ಯೋಗೀಶ್ ಜಪ್ಪಿನಮೊಗರು, ಬಿ.ಕೆ ಇಮ್ತಿಯಾಜ್,ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಮಾತನಾಡಿದರು.

ಮುಜಾಫರ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಬೀದಿಬದಿ ವ್ಯಾಪಾರಸ್ಥರ ಸಂಘದ ಪ್ರಮುಖರಾದ ಹಸನ್ ಕುದ್ರೋಳಿ, ಅಬ್ದುಲ್ ಕಾದರ್ ಹಂಝ ಮೊಹಮ್ಮದ್,ಲತೀಫ್,ಎಂ ಎನ್ ಶಿವಪ್ಪ, ಚಂದ್ರಶೇಖರ ರಾವ್, ಸಿಕಂದರ್, ಕಾಜ ಮೊಯ್ದಿನ್, ಸ್ಟಾನಿ ಡಿಸೋಜಾ, ಗೀತಾ ಬಾಯಿ, ಸಿದ್ದಮ್ಮ, ಶಾಂತಮ್ಮ, ಶಾಲಿನಿ, ಎಂ ಎಸ್ ಮೊಯಿದಿನ್, ರಾಘವೇಂದ್ರ ಪುತ್ತೂರು, ಪ್ರಸಾದ್ ಪುತ್ತೂರು, ಕಲಾ, ರಾಜೀವಿ ಕದ್ರಿ, ಹರೀಶ್ ಬೈಕಂಪಡಿ, ಭಾಸ್ಕರ್ ಸುರತ್ಕಲ್, ಗುಡ್ಡಪ್ಪ, ಮುತ್ತುರಾಜ್, ಅಶ್ರಫ್,ಸುಂದರ ಪೂಜಾರಿ ಕುತ್ತಾರ್, ಜಯಶಾಂತಿ ಕೋಟೆಕಾರ್, ಚಂದ್ರವತಿ ಬೀರಿ,

ಸಂತೋಷ್ ಆರ್ ಎಸ್ ಸ್ವಾಗತಿಸಿ, ವಿಜಯ್ ಜೈನ್  ಸಂತೆ ವ್ಯಾಪಾರಿಗಳ ಸಂಘದ ಪ್ರಮುಖರಾದ ಸಿದ್ದಿಕ್, ಸಿರಾಜ್ ಕೈಕಂಬ, ವಂದಿಸಿದರು.

ಮುಂದಿನ ಭಾನುವಾರದಿಂದ ಸಂಡೆ ಬಜಾರ್ ವ್ಯಾಪಾರಕ್ಕೆ ಅವಕಾಶ ನೀಡದಿದ್ದಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸುತ್ತೇವೆ ಸುಪ್ರೀಂ ಕೋರ್ಟ್ ಆದೇಶವನ್ನು ತಪ್ಪಾಗಿ ವ್ಯಾಖ್ಯಾನಿಸಿ ಸಂಡೆ ಬಜಾರ್ ವ್ಯಾಪಾರಿಗಳಿಗೆ ಕಿರುಕುಳ ನೀಡಲಾಗಿದೆ. ಮೂರು ತಿಂಗಳಿಂದ ಸಂಡೆ ಬಜಾರ್ ವ್ಯಾಪಾರಿಗಳು ಹೋರಾಟ ನಡೆಸುತ್ತಿದ್ದರೂ ನಗರ ಪಾಲಿಕೆ ಹಠಮಾರಿ ಧೋರಣೆ ತಳೆಯುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. -ಬಿ.ಕೆ. ಇಮ್ತಿಯಾಜ್, ಗೌರವಾಧ್ಯಕ್ಷರು, ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ರಿ), ಮಂಗಳೂರು 


ಜಿಲ್ಲಾ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು:

1.ಬೀದಿಬದಿ ವ್ಯಾಪಾರಿಗಳ ಜೀವನ ಸಂರಕ್ಷಣೆ ಕಾಯಿದೆ 2014 ಸಮಗ್ರ ಜಾರಿ ಮಾಡಬೇಕು, ಕಾನೂನು ಬಾಹಿರ ಕಾರ್ಯಾಚರಣೆ ನಿಲ್ಲಿಸಬೇಕು.

2.ಮಂಗಳೂರು ನಗರಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಟ್ಟಣ ವ್ಯಾಪಾರ ಸಮಿತಿ ರಚನೆ ಮಾಡಿ ಬೀದಿ ವ್ಯಾಪಾರಿಗಳ ಸಮೀಕ್ಷೆ ನಡೆಸಿ ಐಡಿ ಕಾರ್ಡ್, ವ್ಯಾಪಾರದ ಪ್ರಮಾಣ ಪತ್ರ ನೀಡಲು ಕ್ರಮ ಕೈಗೊಳ್ಳಬೇಕು.

3.ಪ್ರಧಾನಮಂತ್ರಿಗಳ ಆತ್ಮ ನಿರ್ಭರ ಸ್ವನಿಧಿ ಯೋಜನೆಯ ಸಾಲ ಯೋಜನೆಯ ಸಾಲದ ಮಿತಿಯನ್ನು ಏರಿಕೆ ಮಾಡಬೇಕು, ಐವತ್ತು ಸಾವಿರ ಸಾಲ ಮರು ಪಾವತಿ ಮಾಡಿದ ವ್ಯಾಪಾರಿಗಳಿಗೆ ಒಂದು ಲಕ್ಷ ಸಾಲವನ್ನು ಬ್ಯಾಂಕುಗಳೇ ಸಾಲ ಮಂಜೂರು ಮಾಡಲು ಅಧಿಕಾರ ನೀಡಬೇಕು.

4.ಸಂಡೆ ಬಜಾರ್ ವ್ಯಾಪಾರಕ್ಕೆ ಅವಕಾಶ ನೀಡಬೇಕು,ಸಂಡೆ ಬಜಾರ್ ವ್ಯಾಪಾರಿಗಳ ಮೇಲಿನ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು, ಜಿಲ್ಲೆಯ ವಿವಿಧಡೆ ವ್ಯಾಪಾರ ಮಾಡುವ ವಾರದ ಸಂತೆ ಬಜಾರ್ ವ್ಯಾಪಾರಿಗಳ ಹಿತರಕ್ಷಣೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು.

5. ಬೀದಿಬದಿ ವ್ಯಾಪಾರಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ಜಾರಿಗೊಳಿಸಬೇಕು 

6. ಬೀದಿಬದಿ ವ್ಯಾಪಾರಿಗಳಿಗೆ 10ಲಕ್ಷ ರೂಪಾಯಿಯ ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸಬೇಕು.

7. ಎಲ್ಲಾ ಬೀದಿಬದಿ ವ್ಯಾಪಾರಿಗಳಿಗೆ ಬಿಪಿಎಲ್ ಕಾರ್ಡ್ ವಿತರಿಸಬೇಕು, ನಿವೇಶನ ರಹಿತ ವ್ಯಾಪಾರಿಗಳಿಗೆ ಮನೆ,ನಿವೇಶನ ಒದಗಿಸಬೇಕು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article