ಮಂಗಳೂರು ರೈಲ್ವೇ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆ: ರೈಲ್ವೇ ನೌಕರರ ಪ್ರತಿಭಟನೆ

ಮಂಗಳೂರು ರೈಲ್ವೇ ಪ್ರದೇಶ ಮೈಸೂರು ವಿಭಾಗಕ್ಕೆ ಸೇರ್ಪಡೆ: ರೈಲ್ವೇ ನೌಕರರ ಪ್ರತಿಭಟನೆ

ಮಂಗಳೂರು: ಮಂಗಳೂರು ರೈಲ್ವೇ ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಿರುವ ಹಿನ್ನೆಲೆಯಲ್ಲಿ, ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈಲ್ವೇ ನೌಕರರು ಬುಧವಾರ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಆವರಣದಲ್ಲಿ ಬೃಹತ್ ಪ್ರತಿಭಟನಾ ಧರಣಿ ನಡೆಸಿದರು.

ಆಲ್ ಇಂಡಿಯಾ ರೇಲ್ವೇಮೆನ್ಸ್ ಫೆಡರೇಷನ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ನೌಕರರು ಭಾಗವಹಿಸಿ ರೈಲ್ವೇ ಆಡಳಿತ ಮಂಡಳಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪಾಲ್ಗಾಟ್ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುವ ಎಲ್ಲಾ ಉದ್ಯೋಗಿಗಳನ್ನು ತಕ್ಷಣವೇ ಬಿಡುಗಡೆ  ಮಾಡಬೇಕು, ತಕ್ಷಣವೇ ಆಯ್ಕೆ ನಮೂನೆಯನ್ನು  ಬಿಡುಗಡೆ ಮಾಡಬೇಕು, ವರ್ಗಾವಣೆಯಾಗಬೇಕಾದ ಉದ್ಯೋಗಿಗಳ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿ ಮತ್ತು ಉದ್ಯೋಗಿಗಳ ಕಳವಳಗಳನ್ನು ಬಗೆಹರಿಸಬೇಕು ಸಹಿತ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿ ಸಿದರು. 

ಮಂಗಳೂರಿನಲ್ಲಿರುವ ಸುಮಾರು ಶೇ.90ರಷ್ಟು ರೈಲ್ವೆ ನೌಕರರು ಕೇರಳ ಮೂಲದವರಾಗಿದ್ದು, ಅವರಲ್ಲಿ ಸುಮಾರು ಶೇ.೪೦ರಷ್ಟು ಮಂದಿ ಸದ್ಯಕ್ಕೆ ಬೇರೆಡೆಗೆ ವರ್ಗಾವಣೆಯಾಗಲು ಸಿದ್ಧರಿಲ್ಲ. ಹೀಗಾಗಿ, ಅಂತಹ ನೌಕರರನ್ನು ತಕ್ಷಣವೇ ವರ್ಗಾವಣೆ ಮಾಡಬಾರದು ಎಂದು ಸಂಘಟನೆಯ ಮುಖಂಡರು ಒತ್ತಾಯಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article