ಕಾರು ಸಹಿತ ಉದ್ಯಮಿ ನಾಪತ್ತೆ
Wednesday, September 9, 2026
ವಿಟ್ಲ: ಪುಣಚ ಗ್ರಾಮದ ಉದ್ಯಮಿಯೊಬ್ಬರು ಕಾರು ಸಹಿತ ದಿಢೀರ್ ನಾಪತ್ತೆಯಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.
ಪುಣಚ ಗ್ರಾಮದ ಅಚ್ಚಿಲ ನಿವಾಸಿ ಇಬ್ರಾಹಿಂ ಮುಸ್ಲಿಯಾರ್ ಅವರ ಪುತ್ರ, ಉದ್ಯಮಿ ಜಾಫರ್ ನಾಪತ್ತೆಯಾದವರಾಗಿದ್ದಾರೆ. ಇವರು ಪುಣಚದಲ್ಲಿ ‘ಅಚ್ಚಿಲ ಮೊಬೈಲ್ ಶಾಪ್’ ಹಾಗೂ ಟೂರಿಸ್ಟ್ ವಾಹನಗಳ ಉದ್ಯಮವನ್ನು ನಡೆಸುತ್ತಿದ್ದರು.
ಇಂದು ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ಮಂಗಳೂರಿಗೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೊರಟಿದ್ದ ಜಾಫರ್, ತದನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಅವರ ಬಳಿಯಿದ್ದ ಎರಡೂ ಮೊಬೈಲ್ ಫೋನ್‌ಗಳು ಸ್ವಿಚ್ಡ್ ಆಫ್ ಆಗಿದ್ದು, ಕುಟುಂಬಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ.
ಈ ಕುರಿತು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಮೊಬೈಲ್ ನೆಟ್‌ವರ್ಕ್ ಲೊಕೇಶನ್ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ.