ಭರ್ಜರಿ ಘೋಷಣೆ ಮಾಡಿ ಜನರ ಕೈಗೆ ಚೊಂಬು ಕೊಟ್ಟ ಕಾಂಗ್ರೆಸ್ ಸರಕಾರ: ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ರಾಜ್ಯ ಸರಕಾರದ ವಿರುದ್ಧ ಇಂದು ನಗರದ ಕ್ಲಾಕ್ ಟವರ್ ಬಳಿ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸರಕಾರದ ಘೋಷಣೆಗಳು ಜನರ ನಿರೀಕ್ಷೆಗಳನ್ನು ಈಡೇರಿಸಿಲ್ಲ ಎಂದು ಟೀಕಿಸಿದರು.
ಶಾಸಕ ಡಾ. ವೈ. ಭರತ್ ಶೆಟ್ಟಿ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರವನ್ನು ‘ದಿವಾಳಿ ಸರಕಾರ’ ಎಂದು ಬಣ್ಣಿಸಿ, ಅದರ ಆರ್ಥಿಕ ನಿರ್ವಹಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ರಾಜ್ಯದ ಆರ್ಥಿಕತೆ ಕುಸಿಯುತ್ತಿದೆ ಎಂದು ಆರೋಪಿಸಿದರು. ಸರಕಾರ ತನ್ನ ಹಣಕಾಸು ನಿರ್ವಹಣೆಯ ಲೆಕ್ಕವನ್ನು ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕಾಂಗ್ರೆಸ್ ಸರಕಾರ ಜನರ ‘ಕಿವಿ ಮೇಲೆ ಹೂ, ಕೈಗೆ ಚೊಂಬು’ ನೀಡಿದೆ ಎಂದು ವ್ಯಂಗ್ಯವಾಡಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಾಲಕೃಷ್ಣ ಭಟ್ ಹಾಗೂ ಮೋನಪ್ಪ ಭಂಡಾರಿ, ಸುಲೋಚನಾ ಭಟ್, ಪುಲಸ್ಯ ರೈ, ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ, ದಯಾನಂದ ಉಜಿರೆಮಾರ್, ಚನ್ನಪ್ಪ ಕೊಟ್ಯಾನ್, ದಿನೇಶ್ ಪುತ್ರನ್, ಜಗದೀಶ್ ಆಳ್ವಾ, ರಮೇಶ್ ಕಂಡೆಟ್ಟು, ರಾಜೇಶ್ ಕೊಟ್ಟಾರಿ, ನಂದನ್ ಮಲ್ಯ, ಜೈಸಿಲ್ ಡಿಸೋಜಾ, ದಿನೇಶ್ ಅಮ್ಟೂರು, ಜಯಂತಿ ನಾಯ್ಕ್, ಚಂದ್ರಶೇಖರ ಬಪ್ಪಳಿಗೆ, ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ, ಸಂಜಯ್ ಪ್ರಭು, ಅರುಣ್ ಜಿ. ಶೇಟ್, ಡಾ ಮಂಜುಳಾ ಅನಿಲ್ ರಾವ್, ರಾಜಗೋಪಾಲ್ ರೈ, ಪೂಜಾ ಪೈ, ಕವಿತಾ ಸನಿಲ್, ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಕೇಶ್ ರೈ ಕೆಡಿಂಜಿ, ಪ್ರಸನ್ನ ಕುಮಾರ್ ಮಾರ್ತಾ, ಧನಲಕ್ಷ್ಮಿ ಗಟ್ಟಿ, ಪೂರ್ಣಿಮಾ, ಶೋಭೇಂದ್ರ ಸಸಿಹಿತ್ಲು, ಸುಜಿತ್ ಪ್ರತಾಪ್ ,ಸುಧೀರ್ ಕುಮಾರ್ ಶೆಟ್ಟಿ, ಪ್ರಸನ್ನ ದರ್ಬೆ, ಕದ್ರಿ ಮನೋಹರ್ ಶೆಟ್ಟಿ, ನಿತಿನ್ ಕುಮಾರ್, ರವಿಶಂಕರ್ ಮಿಜಾರು ಮೊದಲಾದವರಿದ್ದರು.