ಆಹಾರ ಗುಣಮಟ್ಟ, ಸ್ವಚ್ಛತೆ ಪರಿಶೀಲನಾ ದಾಳಿ ಮುಂದುವರಿಕೆ: ಸಚಿವ ಯು.ಟಿ.ಖಾದರ್
ನಗರದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಹಾರ ಸುರಕ್ಷತ ಮತ್ತು ಔಷಧ ಆಡಳಿತ ಇಲಾಖೆಯ ವಿಭಾಗದಿಂದ ಹಲವೆಡೆ ತಾಳಿ ನಡೆಯುತ್ತಿದೆ. ಯಾರೇ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿ ಬಿದ್ದರೂ ನನ್ನ ಆತ್ಮೀಯರಾಗಿದ್ದರೂ ಬಿಡುವ ಪ್ರಶ್ನೆ ಇಲ್ಲ. ಯಾಕೆಂದರೆ ಅಲ್ಲಿ ಆಹಾರ ಸೇವಿಸುವವರೂ ನನ್ನ ಆತ್ಮೀಯರಾಗಿದ್ದು, ಅವರ ಪರವಾಗಿ ನಾನು ನಿಲ್ಲಬೇಕು. ಹಾಗಾಗಿ ಎಲ್ಲರೂ ಆಹಾರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
ದೇಶಪ್ರೇಮಿ ಆಗಲು ಸಾಧ್ಯವಿಲ್ಲ..
ಬಸವರಾಜ ರಾಯರೆಡ್ಡಿ ಅಪಾರ ಜ್ಞಾನಭರಿತ ಹಾಗೂ ಪ್ರಾಮಾಣಿಕ ಶಾಸಕ. ಅವರು ನನ್ನ ತಂದೆಯ ಕಾಲದಲ್ಲೇ ಶಾಸಕರಾಗಿದ್ದವರು. ಅಂತಹ ವ್ಯಕ್ತಿತ್ವಕ್ಕೆ ನಾವು ಗೌರವ ಕೊಡಬೇಕು. ಅವರು ಯಾವುದೇ ಪಕ್ಷದಲ್ಲಿ ಇದ್ದರೂ ಗೌರವಿಸಬೇಕು. ಅವರು ಯಾವತ್ತೂ ಜನರಿಗೆ ತೊಂದರೆ ಮಾಡಿಲ್ಲ. ಶಾಸರಕಾಗಿದ್ದ ಸಂದರ್ಭ 1 ರೂ. ಮಾತ್ರ ಪಡೆಯುತ್ತಿದ್ದ ಅವರನ್ನು ರಾಯಲ್ ರೆಡ್ಡಿ ಎಂದೇ ಕರೆಯಲಾಗುತ್ತಿತ್ತು. ಅವರು ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಸಂದರ್ಭಕ್ಕೆ ತಕ್ಕ ಹಾಗೆ ತಮ್ಮ ಮನಸ್ಸಿಗೆ ಬಂದಿದ್ದನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಅವರು ಹಿಂದೂ ಧರ್ಮವನ್ನು ಅತ್ಯುತ್ತಮವಾಗಿ ಪಾಲಿಸುತ್ತಾರೆ, ಅವರು
ದೇವಭಕ್ತ ಕೂಡಾ. ಅವರ ಹೇಳಿಕೆಯನ್ನು ರಾಜಕೀಯ ಮಾಡುವ ನೀಚ ಮನಸ್ಥಿತಿ ಯಾಕೆ ಎಂದು ಪ್ರಶ್ನಿಸಿದ ಅವರು, ಈ ರೀತಿ ರಾಜಕೀಯ ಮಾಡುವವರು ದೇಶಪ್ರೇಮಿ ಆಗಲು ಸಾಧ್ಯವಿಲ್ಲ ಎಂದರು.