ಶಾಸಕರು ಕೆಆರ್‌ಐಡಿಎಲ್‌ಗೆ ಕಾಮಗಾರಿ ವಹಿಸುವುದೇಕೆ?: ಎಸ್‌ಐಆರ್‌ನಿಂದ ಅರ್ಹರನ್ನು ಕೈಬಿಡಬಾರದು
ನಗರದಲ್ಲಿ ಇಂದು ಸುದ್ದಿಗೋಷ್ಥಿಯಲ್ಲಿ ಕೆಆರ್‌ಐಡಿಎಲ್ ಬಗ್ಗೆ ಶಾಸಕ ಅಶೋಕ್ ರೈ ನೀಡಿರುವ ದೂರಿನ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಶಾಸಕರು ಸರಕಾರದ ಮೇಲಿನ ಕಾಳಜಿಯಿಂದ ದೂರು
ನೀಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟಸಚಿವರ ಜತೆ ಮಾತುಕತೆ ನಡೆಸಲಾಗಿದೆ. ಅಧಿಕಾರಿಗಳು ತಪ್ಪು ಮಾಡಿದ್ದರೆ ಅವರನ್ನು ಕೆಲಸದಿಂದ ವಜಾ ಮಾಡಬೇಕು. ಈ ಬಗ್ಗೆ ತನಿಖೆ ನಡೆದು ಸತ್ಯಾಂಶ ಹೊರಬರಲಿ ಎಂದು ಹೇಳಿದರು.
ಟೆಂಡರ್ ಮಾಡುವುದಿಲ್ಲ. ಹಾಗಾಗಿ ನಾನು ಪಿಡಬ್ಲ್ಯುಡಿ ಅಥವಾ ಆರ್ಡಿಪಿಆರ್ಗೆ ಮಾತ್ರ ಕೊಡುವುದು. ಕೆಆರ್‌ಐಡಿಎಲ್ನ ಸಮಸ್ಯೆ ಬಗ್ಗೆ ನಾನು ಅಸೆಂಬ್ಲಿಯಲ್ಲಿಯೂ ಮಾತನಾಡಿದ್ದೇನೆ ಎಂದು ಹೇಳಿದರು.
ದಾಳಿ..
ಮಂಗಳೂರಿನಲ್ಲಿಯೂ ಕ್ಯೂಆರ್ ಕೋಡ್ ಮೂಲಕ ಬಂದ ದೂರಿನ ಹಿನ್ನೆಲೆಯಲ್ಲಿ ಈಗಾಗಲೇ ಎರಡು ದಾಳಿ ನಡೆದಿದೆ. ಆಪ್‌ನಲ್ಲಿರುವ ಕ್ಯೂಆರ್ ಕೋಡ್‌ಗಳನ್ನು ಹೊಟೇಲ್, ಆಹಾರ ಮಳಿಗೆ
ಹಾಗೂ ಸಾರ್ವಜನಿಕ ಸ್ಥಳಗಳಲ್ಲೂ ಅಳವಡಿಸಲು ಕ್ರಮ ವಹಿಸಲಾಗುವುದು. ಯಾರ ವ್ಯಾಪಾರ ಬಂದ್ ಮಾಡಿಸಬೇಕೆಂಬುದು ನಮ್ಮ ಉದ್ದೇಶವವಲ್ಲ. ಆದರೆ ಜನರಿಗೆ ಮೋಸ ಆಗಬಾರದು. ವ್ಯಾಪಾರಿಗಳೂ ತಮ್ಮ ಬದುಕಟ್ಟಿಕೊಳ್ಳಬೇಕು. ವ್ಯಾಪಾರದ ಮೂಲಕ ಅವರೂ ಸಮಾಜಕ್ಕೆ ಕೊಡುಗೆ ನೀಡಬೇಕು. ಹಾಗಾಗಿ ಇದೀಗ ಪ್ರಥಮ ಹಂತದಲ್ಲಿ ಕನಿಷ್ಟದಂಡದ ಮೂಲಕ ಎಚ್ಚರಿಕೆ ನೀಡುವ ಕ್ರಮ ಆಗುತ್ತಿದೆ ಎಂದು ಹೇಳಿದರು.
ಆಹಾರ ಗುಣಮಟ್ಟತಪಾಸಣೆಗೆ ಸಂಬಂಧಿಸಿ ಸುಸಜ್ಜಿತ ಲ್ಯಾಬ್ ಆರಂಭಿಸುವ ಯೋಜನೆ ಆರಂಭಿಕ ಹಂತದಲ್ಲಿದೆ. ಕಳಪೆ ಆಹಾರ ಪೂರೈಕೆ ಸಂಬಂಧಿಸಿ ನಡೆಯುವ ದಾಳಿ ವೇಳೆ ಸಿಕ್ಕಿಬೀಳುವ ದೊಡ್ಡ ಕಂಪನಿಗಳು ನ್ಯಾಯಾಲಯದ ಮೂಲಕ ರಕ್ಷಣೆ ಪಡೆದು ಲ್ಯಾಬ್ ಸರಿ ಇಲ್ಲ ಎಂಬ ಸಬೂಬು ನೀಡಿ ಬಚಾವ್ ಆಗುತ್ತಾರೆ. ಅದಕ್ಕೆ ಅವಕಾಶ ಆಗದಂತೆ ಸುಪ್ರೀಂ ಕೋರ್ಚ್ ಹೋದರೂ ಪ್ರಯೋಗಾಲಯದ ವರದಿಯನ್ನು ಎತ್ತಿ ಹಿಡಿಯುವ ರೀತಿಯ ಸುಸಜ್ಜಿತ ಲ್ಯಾಬ್ ಅಸ್ತಿತ್ವಕ್ಕೆ ಬರಲಿದೆ ಎಂದರು.
ಪಡಿತರ ಹಾಗೂ ಇತರ ಆಹಾರದ ಕಲಬೆರಕೆಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ದೂರು ಬಂದಾಗ ಕ್ರಮ ಆಗಲಿದೆ ಎಂದರು.
ದಸರಾ ಶ್ರದ್ಧಾಪೂರ್ವಕ ಆಚರಣೆ..
ಮಂಗಳೂರು ದಸರಾವನ್ನು ಅದರ ಪಾವಿತ್ರ್ಯತೆಯೊಂದಿಗೆ ಶ್ರದ್ಧಾಪೂರ್ವಕವಾಗಿ ಆಚರಿಸಲು ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಅದಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೂ ದಸರಾವನ್ನು ಸಂಸ್ಕೃತಿ, ಪಾರಂಪರಿಕ ಹಿನ್ನೆಲೆಯೊಂದಿಗೆ ನಡೆಸಲು ಸಲಹೆ ನೀಡಿದ್ದರೆ. ಮಂಗಳೂರಿನ ಗೋಕರ್ಣನಾಥ, ಮಂಗಳಾದೇವಿ, ಮಾರಿಗುಡಿ, ವೆಂಕಟರಮಣ ಸೇರಿದಂತೆ ಎಲ್ಲಾ ದೇವಾಲಯಗಳನ್ನು ಕ್ರೋಢೀಕರಿಸಿಕೊಂಡು ದಸರಾ ಆಚರಿಸಲಾಗುತ್ತಿದೆ. ಇದರ ಭಾಗವಾಗಿ ಉಳ್ಳಾಲದಲ್ಲಿ ಪ್ರಥಮ ಬಾರಿಗೆ ಯುವ ದಸರಾ ನಡೆಸಲು ತೀರ್ಮಾನಿಸಲಾಗಿದೆ. ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟವಿವಿಧ ಕ್ಷೇತ್ರಗಳ ಪ್ರತಿಭೆಗಳನ್ನು ಗೌರವಿಸುವ, ಶ್ರೇಷ್ಟಕಲಾವಿದರನ್ನು ಕರೆಸಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ರೀತಿಯಲ್ಲಿ ಈ ಯುವ ದಸರಾ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಅರ್ಹರನ್ನು ಕೈಬಿಡಬಾರದು..
ಎಸ್‌ಐಆರ್‌ಗೆ ಸಂಬಂಧಿಸಿ ದ್ವಿತೀಯ ಹಂತದ ಪರಿಶೀಲನೆ ನಡೆಯುತ್ತಿದ್ದು, ಈ ಸಂದರ್ಭ ಪಟ್ಟಿಯಿಂದ ಹೆಸರು ತೆಗೆಯುವುದು ಮಾತ್ರವಲ್ಲ, ಅರ್ಹ ಮತದಾರರ ಹೆಸರು ಸೇರ್ಪಡೆ ಬಗ್ಗೆ ಗಮನ ಹರಿಸುವಂತೆ ಚುನಾವಣಾ ಆಯೋಗದ ಆಯುಕ್ತರಿಗೆ ಮನವಿ ಮಾಡಲಾಗಿದೆ. ಹೆಸರಿನಲ್ಲಿ ತೊಂದರೆ ಇದ್ದಾಗ ಸರಿಪಡಿಸುವ ಕೆಲಸವಾಗಬೇಕು. ಮ್ಯಾಪಿಂಗ್ಗೆ ಸಂಬಂಧಿಸಿ ವಿದೇಶದಲ್ಲಿ ಇರುವ ನೆಪದಲ್ಲಿ ಮತದಾರರ ಪಟ್ಟಿಯಿಂದ ಕೈಬಿಡಬಾರದು. ಅವರಿಗೆ ವಿಶೇಷ ವ್ಯವಸ್ಥೆ ಮಾಡಿ ಮತದಾನದ ಹಕ್ಕು ಒದಗಿಸಬೇಕು. ನನ್ನ ವ್ಯಾಪ್ತಿಯಲ್ಲಿ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ. ಎನ್ಯುಮರೇಶನ್ ಫಾರಂ ಭರ್ತಿ ಮಾಡಿ ಬಿಎಲ್‌ಒಗಳಿಗೆ ನೀಡದಿದ್ದಲ್ಲಿ ಅದು ಜನರ ಸಮಸ್ಯೆಯೇ ಹೊರತು ಅಧಿಕಾರಿಗಳದ್ದಲ್ಲ. ಹಾಗಾಗಿ ದ್ವಿತೀಯ ಹಂತ ಸೇರಿದಂತೆ ಮುಂದಿನ ಹಂತದ ಎಲ್ಲಾ ರೀತಿಯ ಪರಿಶೀಲನಾ ವ್ಯವಸ್ಥೆಯನ್ನು ರಾಜ್ಯಕ್ಕೆ ಏಕ ಮಾದರಿಯಲ್ಲಿ ನಡೆಸಲು ಚುನಾವಣಾ ಆಯೋಗ ಕ್ರಮ ವಹಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಡಾದ ನೂತನ ಅಧ್ಯಕ್ಷ ಸಂತೋಷ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಹೈದರ್ ಕೈರಂಗಳ ಉಪಸ್ಥಿತರಿದ್ದರು.