ಮಂಗಳೂರು-ಕುವೈಟ್ ನೇರ ವಿಮಾನ: ಶೀಘ್ರ ಪುನರಾರಂಭ

ಮಂಗಳೂರು-ಕುವೈಟ್ ನೇರ ವಿಮಾನ: ಶೀಘ್ರ ಪುನರಾರಂಭ

ಮಂಗಳೂರು: ಯುದ್ಧದಿಂದಾಗಿ ಆರು ತಿಂಗಳಿನಿಂದ ಸ್ಥಗಿತಗೊಂಡಿದ್ದ ಮಂಗಳೂರು- ಕುವೈಟ್ ನೇರ ವಿಮಾನ ಸಂಚಾರ ಪುನರಾರಂಭಗೊಳ್ಳುವ ಸೂಚನೆ ಇದೆ.

ಚಳಿಗಾಲದ ವೇಳಾಪಟ್ಟಿಯಂತೆ ಅಕ್ಟೋಬರ್ ಕೊನೆ ವಾರ ಮಂಗಳೂರು-ಕುವೈಟ್ ಮಧ್ಯೆ ನೇರ ವಿಮಾನ ಆರಂಭಿಸುವುದಕ್ಕೆ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಮುಂದಾಗಿರುವುದಾಗಿ ತಿಳಿದುಬಂದಿದೆ. 

ಲಭ್ಯ ಮಾಹಿತಿಯಂತೆ ಅ. 27ರಿಂದ ವಾರಕ್ಕೆ ಮೂರು ಬಾರಿ ಎಂದರೆ ಮಂಗಳವಾರ, ಶುಕ್ರವಾರ, ಶನಿವಾರ ಏರ್‌ಇಂಡಿಯಾ ಎಕ್ಸ್‌ಪ್ರೆಸ್ ಮಂಗಳೂರು-ಕುವೈಟ್ ಮಧ್ಯೆ ಕಾರ್ಯಾಚರಿಸಲಿದೆ. 

ಇರಾನ್-ಇಸ್ರೇಲ್, ಅಮೆರಿಕ ಯುದ್ದ ಆರಂಭಗೊಂಡ ಬಳಿಕ (ಫೆ. 28) ಗಲ್ಫ್ ರಾಷ್ಟ್ರಗಳ ವಿಮಾನ ಸಂಪರ್ಕ ಬಹುತೇಕ ಸ್ಥಗಿತಗೊಂಡಿತ್ತು. ಆದರೆ ಯುದ್ದದ ತೀವ್ರತೆ ಕಡಿಮೆಯಾಗುತ್ತಿದ್ದಂತೆ ಬಹುತೇಕ ರಾಷ್ಟ್ರಗಳಿಗೆ ವಿಮಾನಯಾನ ಪುನರಾರಂಭಗೊಂಡಿತ್ತು. ಆದರೆ ಕುವೈಟ್ ವಿಮಾನ ಮಾತ್ರ ಮತ್ತೆ ಯಾನ ಆರಂಭಿಸಿಲ್ಲ. ಯುದ್ಧದ ಮೊದಲು ವಾರಕ್ಕೆ 3 ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಗಳು ಕುವೈಟ್-ಮಂಗಳೂರು ನಡುವೆ ಯಾನ ನಡೆಸುತ್ತಿದ್ದವು.

ಯುದ್ಧದ ಸಂದರ್ಭದಲ್ಲಿ ಕ್ಷಿಪಣಿ ದಾಳಿಗೆ ತುತ್ತಾಗಿ ಕುವೈಟ್ ವಿಮಾನ ನಿಲ್ದಾಣ ಹಾನಿಗೊಂಡಿತ್ತು. ಅದನ್ನು ಸರಿಪಡಿಸಲಾಯಿತಾದರೂ ತೀರಾ ಇತ್ತೀಚೆಗಿನ ವರೆಗೂ ಜಝೀರಾ ಏರ್‌ಲೈನ್ಸ್ ಹಾಗೂ ಕುವೈಟ್ ಏರ್ವ್ಪೆಸ್ ಮಾತ್ರವೇ ಕಾರ್ಯಾಚರಿಸುತ್ತಿದ್ದವು. ವಿದೇಶಿ ವಿಮಾನಗಳು ನಿಧಾನವಾಗಿ ಆರಂಭವಾಗುತ್ತಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article