ಔಷಧಿಗಳ ಸುರಕ್ಷತೆಯ ತಪಾಸಣೆ ಮುಂದುವರಿಕೆ: ಸಚಿವ ಯು.ಟಿ. ಖಾದರ್
Monday, September 7, 2026
ಮಂಗಳೂರು: ರಾಜ್ಯಾದ್ಯಂತ ಈಗಾಗಲೇ ಆಹಾರ ಸುರಕ್ಷತೆಗೆ ಸಂಬಂಧಿಸಿ ದಾಳಿ ನಡೆಯುತ್ತಿದ್ದು, ಔಷಧಿಗಳ ಸುರಕ್ಷತೆಯ ತಪಾಸಣೆಯೂ ಮುಂದುವರಿಯಲಿದೆ. ಆಹಾರದ ಜೊತೆ ಔಷಧಿ ಬಗ್ಗೆಯೂ ಸಮಸ್ಯೆಗಳಿದ್ದಲ್ಲಿ ದೂರು ನೀಡಲು ಕ್ಯೂಆರ್ ಕೋಡ್ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನ ಪ್ರಜಾಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಎರಡು ಮೂರು ಕಂಪೆನಿಯಲ್ಲಿ ಅವಧಿ ಮೀರಿ, ಮಿಸ್ ಲೇಬಲಿಂಗ್, ದುಬಾರಿ ದರ ಬಗ್ಗೆ ದೂರು ಇತ್ತು. ಹೀಗಾಗಿ ಅಧಿಕಾರಿಗಳು ದಾಳಿ ಮಾಡಿ ಸದ್ಯ ದಂಡ ಹಾಕಿದ್ದಾರೆ. ಈ ಬಗ್ಗೆ ನಾಳೆ ಬೆಂಗಳೂರಿನಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ರೇಟ್ ನಿಯಂತ್ರಣ ಕೇಂದ್ರದ ಕೆಲಸ. ಕೆಲ ಔಷಧಿಗಳಿಗೆ ಸಮರ್ಪಕವಾದ ಒಖP ಕೂಡ ಇಲ್ಲ. ಇವೆಲ್ಲಾ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ವಿಚಾರ ಆಗಿರುವುದರಿಂದ ಈ ಎಲ್ಲಾ ಅಂಶಗಳನ್ನು ಪರಿಗಣಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇಂತಹ ಔಷಧ ಮಾರಾಟ ಪೂರೈಕೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ನಿಯಂತ್ರಣ ಮಾಡಬೇಕಿದ್ದು, ಪರಿಸ್ಥಿತಿಯ ವಿವರವನ್ನು ಕೇಂದ್ರಕ್ಕೆ ನೀಡಲಾಗುವುದು. ಇದರಲ್ಲಿ ನಮ್ಮ ಪಾತ್ರ ಇಲ್ಲದೇ ಇದ್ದರೂ ಕೇಂದ್ರ ಸರಕಾರ ಗಮನ ಹರಿಸಿ ಕ್ರಮ ವಹಿಸಬೇಕು. ಹಾಗಾಗಿ ಸಭೆ ಕರೆಯಲಾಗಿದ್ದು, ಚರ್ಚೆ ನಡೆಸಲಾಗುವುದು ಎಂದರು.