ಬ್ಲಿಂಕಿಟ್ ಮಳಿಗೆಗೆ ಭೆಟಿ: ಪರಿಶೀಲನೆ
Wednesday, September 23, 2026
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಬ್ಲಿಂಕಿಟ್ ಮುಖಾಂತರ ಖರೀದಿಸಲಾದ ನಂದಿನಿ ಬ್ರಾಂಡ್‌ನ ಪನೀರ್ 200 ಗ್ರಾಂ. ಪಾಕೆಟ್‌ಗಳಲ್ಲಿ ಶೆಲ್ಫ್ ಲೈಫ್ ಒಂದು ವರ್ಷ ಇರುವುದಾಗಿ ಮಾಹಿತಿ ಹರಿದಾಡುತಿದ್ದು, ಮಂಗಳೂರಿನ ಬಿಜೈನಲ್ಲಿರುವ ಬ್ಲಿಂಕಿಟ್ ಆನ್‌ಲೈನ್ ಪ್ಲಾಟ್ ಫಾರ್ಮ್ ಮಳಿಗೆಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಲಾಯಿತು.
ಗೋದಾಮಿನಲ್ಲಿದ್ದ ಎಲ್ಲಾ ನಂದಿನಿ ಪನೀರ್ 200 ಗ್ರಾಂ. ಒಂದು ತಿಂಗಳ ಶೆಲ್ಫ್ ಲೈಫ್ ಮಾತ್ರ ಇರುವುದು ಕಂಡುಬಂದಿರುತ್ತದೆ. ತಯಾರಿಕಾ ದಿನಾಂಕವನ್ನು ಲೇಸರ್ ಪ್ರಿಂಟಿನ ಮೂಲಕ ಚುಕ್ಕಿಗಳಲ್ಲಿ ನಮೂದಿಸಿರುವುದರಿಂದ 2026 ಇಸವಿ 2025 ಎಂಬುದಾಗಿ ಭಾಸವಾಗುತ್ತಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಅವರ ಆದೇಶದಂತೆ ಬಿಜೈನಲ್ಲಿರುವ ಬ್ಲಿಂಕಿಟ್ ಮಳಿಗೆಗೆ ಭೇಟಿ ಪರಿಶೀಲಿಸಲಾಯಿತು.