ತಣ್ಣೀರುಬಾವಿ ಕಡಲತೀರ ಸ್ವಚ್ಛತೆ
Wednesday, September 23, 2026
ಮಂಗಳೂರು: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ರಾಜ್ಯ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಸಹಯೋಗದೊಂದಿಗೆ ನಗರದ ತಣ್ಣೀರುಬಾವಿ ಕಡಲತೀರದಲ್ಲಿ (ಟ್ರೀ ಪಾರ್ಕ್) ಸ್ವಚ್ಛತಾ ಅಭಿಯಾನ ನಡೆಯಿತು. ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಅಂಗವಾಗಿ ದೇಶಾದ್ಯಂತ ಹಮ್ಮಿಕೊಳ್ಳಲಾದ ’ಸ್ವಚ್ಛ ಸಾಗರ-ಸುರಕ್ಷಿತ ಸಾಗರ 5.0’ ಅಭಿಯಾನದ ಭಾಗವಾಗಿ ನಡೆಸಲಾದ ಕಾರ್ಯಕ್ರಮಮದ ಅಧ್ಯಕ್ಷತೆಯನ್ನು ಎನ್‌ಎಂಪಿಎ ಹಿರಿಯ ಸಾಗರ ಇಂಜಿನಿಯರ್ ಅವಿನಾಶ್ ಬಿ. ವಹಿಸಿದ್ದರು.
ಸಿಐಎಸ್‌ಎಫ್, ಎನ್‌ಎಂಪಿಎ, ಎಂಒಇಎಫ್ ನೋಡಲ್ ಅಧಿಕಾರಿ, ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪ ವಲಯ ಅರಣ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಮಂಗಳೂರು ಮಹಾನಗರಪಾಲಿಕೆ, ಆರೋಗ್ಯ ಇಲಾಖೆ, ಸ್ಥಳೀಯ ಪೊಲೀಸ್ ಹಾಗೂ ವಿವಿಧ ಸ್ಥಳೀಯ ಸಂಘಟನೆ ಗಳು ಸಹಕಾರ ನೀಡಿತ್ತು. ಯೆನೆಪೊಯಾ ಡೀಮ್ಡ್ ಟು ಬಿ ಯೂನಿವರ್ಸಿಟಿ, ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿ ಮತ್ತು ಸ್ವಸ್ತಿಕ್ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ವಿದ್ಯಾರ್ಥಿಗಳು ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.