ಪ್ರಾಣಿಗಳ ಸುರಕ್ಷತೆಗೆ ಆದ್ಯತೆ: ಪಾಳು ಬಿದ್ದ ಬಾವಿ ಮುಚ್ಚಲು ಕ್ರಮ

ಪ್ರಾಣಿಗಳ ಸುರಕ್ಷತೆಗೆ ಆದ್ಯತೆ: ಪಾಳು ಬಿದ್ದ ಬಾವಿ ಮುಚ್ಚಲು ಕ್ರಮ


ಮಂಗಳೂರು: ಪ್ರಾಣಿಗಳು ಬಾವಿಗೆ ಬೀಳುವುದನ್ನು ತಪ್ಪಿಸಲು ಪಾಳು ಬಿದ್ದಿರುವ ಅಪಾಯಕಾರಿ ಬಾವಿಗಳನ್ನು ಗುರುತಿಸಿ, ವರದಿ ನೀಡಬೇಕು. ಹಾಗೂ ಅವುಗಳನ್ನು  ಸುರಕ್ಷಿತವಾಗಿ ಮುಚ್ಚಲು  ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರಾಣಿಗಳು ಬಾವಿಯಲ್ಲಿ ಬೀಳದಂತೆ ಹಾಗೂ ಯಾವುದೇ ಅಪಾಯವಾಗದಂತೆ ನೆಟ್ ಅಳವಡಿಸಲು ಸಂಬಂಧಿಸಿದ ಅಧಿಕಾರಿಗಳು  ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಜು ಕೆ ಸೂಚಿಸಿದರು.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದ ಕಾರ್ಯಕಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುದ್ದು ಪ್ರಾಣಿಗಳ ಮಾರಾಟ ಮಳಿಗೆ ನೋಂದಣಿ ಕುರಿತು ಮಹಾನಗರಪಾಲಿಕೆಯ ಎಲ್ಲಾ ಆರೋಗ್ಯ ನಿರೀಕ್ಷಕರಿಗೆ ಪೆಟ್ ಶಾಪ್ಗಳ ಉದ್ದಿಮೆ ಪರವಾನಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿ ದಯಾ ಸಂಘದಡಿಯಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದ್ದು, ಅದರಂತೆ ಕ್ರಮವಹಿಸಬೇಕು ಎಂದು ಅವರು ಸೂಚಿಸಿದರು.

ಮಂಗಳೂರು ತಾಲೂಕಿನ ಬೊಂಡಂತಿಲ ಗ್ರಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರಾಣಿದಯಾ ಸಂಘದ 12.04 ಎಕ್ರೆ ಜಾಗದಲ್ಲಿನ, 5 ಎಕ್ರೆ ಜಾಗದಲ್ಲಿ ಮಂಗಳೂರು ಮಹಾನಗರಪಾಲಿಕೆಯಿಂದ ಬೀದಿ ನಾಯಿಗಳ ಆಶ್ರಯ ತಾಣ ನಿರ್ಮಾಣದ ಮತ್ತು ನಿರ್ವಹಣೆಯ ಕುರಿತು ಸಮಗ್ರ ಯೋಜನಾ ವರದಿ  ಕಾರ್ಯ ಪ್ರಗತಿ ಹಂತದಲ್ಲಿದೆ. “ಪ್ರಾಣಿ ಮಿತ್ರ ಆಸ್ಪತ್ರೆ” ಸ್ಥಾಪನೆಗೆ ಮೊದಲ ಹಂತದ ಕಾಮಗಾರಿಯನ್ನು ಕೈಗೊಳ್ಳಲು ಪೂರಕವಾಗಿ ರೂ. 4.76 ಕೋಟಿ ಅನುದಾನ ಮಂಜೂರಾತಿ ಕೋರಿ ಇಲಾಖಾ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಅರುಣ್ ಕುಮಾರ್, ಸಮಿತಿ ಸದಸ್ಯರಾದ ಸಿ.ಎ.ಪ್ರಸನ್ನ ಶೆಣೈ, ಹರೀಶ್ ಆರ್, ರಜನಿ ಡಿ.ಶೆಟ್ಟಿ, ಕೆ.ಜಯಕೀರ್ತಿ ಜೈನ್, ಸುಮಾ ಆರ್. ನಾಯಕ್ ಮತ್ತಿತ್ತರರು ಇದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article