ಯಶಸ್ವಿನಿ ಕದ್ರಿಯವರ ಮಾಯಕದ ಕತೆಗಳು ಪುಸ್ತಕ ಬಿಡುಗಡೆ
ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಾಯಕ ಎಂಬುದು ವಾಸ್ತವ ಲೋಕಕ್ಕೆ ಒಂದು ಶಕ್ತಿಶಾಲಿ ರೂಪಕ. ಮಾಯಕ ಮತ್ತು ವಾಸ್ತವ ಲೋಕಗಳೆರಡನ್ನೂ ಬೆಸೆದ ಈ ಕಥೆಗಳನ್ನ, ಮನುಷ್ಯ ಸಹಜ ಭಾವನೆಗಳಾದ ಪ್ರೀತಿ, ಅಸಹನೆ, ಸಿಟ್ಟು, ಅಸೂಯೆ, ಛಲ ಇತ್ಯಾದಿ ಹಿನ್ನಲೆಗಳನ್ನ ಇಟ್ಟುಕೊಂಡು ಓದಬೇಕೆಂದರು. ಕಥೆಗಳು ಮನುಷ್ಯರ ನಡವಳಿಕೆಗಳನ್ನ ಕಾಣಲಿರುವ ಕಿಟಕಿಗಳೆಂದು ಕರೆದು, ಓದುವಾಗ ಗಮನದಲ್ಲಿಡಬೇಕಾದ ಅಂಶಗಳನ್ನ ಟಿಪ್ಪಣಿ ಮಾಡಿದರು.
ಪುಸ್ತಕದ ಕಥೆಯೊಂದರ ಕೆಲವು ಭಾಗಗಳನ್ನು ಸಂತ ಆಗ್ನೆಸ್ ಸಿಬಿಎಸ್‌ಸಿ ಶಾಲೆಯ ಶಿಕ್ಷಕಿ ಯಶಸ್ವಿನಿ ಎಮ್. ಕಾವ್ಯಾತ್ಮಕವಾಗಿ ವಾಚಿಸಿದರು.
ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಸಂಪೂರ್ಣಾನಂದ ಬಳ್ಕೂರು, ಕೃತಿಯ ಲೇಖಕಿ ಯಶಸ್ವಿನಿ ಕದ್ರಿ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಸಿ.ಡಾ. ಎಮ್. ವೆನಿಸ್ಸಾ ಎ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸೇವಾ ಅಧಿಕಾರಿ ಡಾ. ಉದಯ್ ಕುಮಾರ್ ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಸ್ತ್ಯಾಂ ಪಾಯಸ್ ವಂದಿಸಿದರು. ಕನ್ನಡ ಉಪನ್ಯಾಸಕಿ ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.