ದ.ಕ. ಜಿಲ್ಲೆಯ ಹತ್ತಿರದ ಜಿಲ್ಲೆಗಳ ಶಿಕ್ಷಕರಿಗೂ ಸಂಶೋಧನಾ ಕೇಂದ್ರ ಪ್ರಯೋಜನವಾಗಲಿದೆ: ಸಂಸದ ಕ್ಯಾ. ಬ್ರಿಜೇಶ್ ಚೌಟ

ದ.ಕ. ಜಿಲ್ಲೆಯ ಹತ್ತಿರದ ಜಿಲ್ಲೆಗಳ ಶಿಕ್ಷಕರಿಗೂ ಸಂಶೋಧನಾ ಕೇಂದ್ರ ಪ್ರಯೋಜನವಾಗಲಿದೆ: ಸಂಸದ ಕ್ಯಾ. ಬ್ರಿಜೇಶ್ ಚೌಟ


ಮಂಗಳೂರು: ಶಕ್ತಿ ಸಂಶೋಧನಾ ಮತ್ತು ತರಬೇತಿ ಕೇಂದ್ರವು ಕೇವಲ ಶಕ್ತಿ ವಿದ್ಯಾಸಂಸ್ಥೆಗೆ ಸೀಮಿತವಾಗಿರದೇ, ದ.ಕ., ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಶಿಕ್ಷಕರಿಗೆ ಇದು ಪ್ರಯೋಜನವಾಗಲಿದೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.


ಅವರು ಇಂದು ಹೆಚ್‌ಪಿಸಿಎಲ್‌ನ ಸಹಯೋಗದೊಂದಿಗೆ ನಗರದ ಶಕ್ತಿ ನಗರದಲ್ಲಿರುವ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಾಣವಾದ ಶಕ್ತಿ ಸಂಶೋಧನ ಮತ್ತು ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


2047ರ ವಿಕಾಸಿತ ಭಾರತ ನಿರ್ಮಾಣಕ್ಕೆ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದು, ಅವರ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಯುವ ಜನತೆಯು ನಮ್ಮ ಮನೆ, ನಮ್ಮ ನಗರ, ನಮ್ಮ ದೇಶದ ಸ್ವಚ್ಛತೆಯನ್ನು ಕಾಪಾಡಬೇಕು. ಇದರೊಂದಿಗೆ ನಾವು ಶಿಸ್ತನ್ನು ಕಾಪಾಡಿಕೊಳ್ಳುವ ಮೂಲಕ ಭಯಮುಕ್ತ ಜೀವನವನ್ನು ರೂಪಿಸಿಕೊಂಡು, ಉತ್ತಮ ಶಿಕ್ಷಣವನ್ನು ಪಡೆದು ದೇಶಕ್ಕೆ ಕೊಡುಗೆಯನ್ನು ನೀಡಬೇಕು ಎಂದು ಹೇಳಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಶಿಕ್ಷಕರಿಗೆ ಉಪಯೋಗವಾಗುವ ಸಂಶೋಧನೆ ಹಾಗೂ ತರಬೇತಿ ಕೇಂದ್ರವನ್ನು ಶಕ್ತಿ ವಿದ್ಯಾಸಂಸ್ಥೆ ಪ್ರಾರಂಭಿಸಿದ್ದು, ಎನ್‌ಇಪಿ ಶಿಕ್ಷಣ ನೀತಿಯ ಬಗ್ಗೆ ಅಧ್ಯಾಯನ ನಡೆಸಿ, ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡುವಲ್ಲಿ ಸಹಕಾರಿಯಾಗಲಿದೆ ಎಂದ ಅವರು ಯುವ ಜನತೆ ಶಕ್ತಿಯುತವಾಗಬೇಕಾದರೆ ಅದ್ಯಾಪಕರು ತರಬೇತಿ ಮಾಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದರೆ ಅದು ಉತ್ತಮ ಸಮಾಜ ನಿಮಾರ್ಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.


ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಕೇವಲ ಶಿಕ್ಷಣವನ್ನು ಮಾತ್ರವಲ್ಲದೇ, ಮೌಲ್ಯಯುತ ಸಂಸ್ಕಾರವನ್ನೂ ಪಡೆಯುವುದರಿಂದ ಮುಂದಿನ ದಿನದಲ್ಲಿ ಉತ್ತಮ ಸಮಾಜ ಕಟ್ಟುವಲ್ಲಿ ಯಶಸ್ವಿಯಾಗುತ್ತಾರೆ ಎಂದ ಅವರು ಪ್ರತಿಯೊಬ್ಬರಿಗೂ ಜೀವನ ರೂಪಿಸಿಕೊಳ್ಳಲು 1 ಅಥವಾ 2 ಅವಕಾಶಗಳು ಸಿಗುತ್ತಿದ್ದು, ಅದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಅದಕ್ಕೆ ಪ್ರಾಯೋಗಿಕ ಅನುಭವದ ಅಗತ್ಯವಿದೆ. ಕೇವಲ ಶಿಕ್ಷಣವನ್ನು ಮಾತ್ರವಲ್ಲದೇ, ಇತರ ಅನುಭವವನ್ನು ಪಡೆದುಕೊಳ್ಳುವಂತೆ ತಿಳಿಸಿದರು.


ಹೆಚ್‌ಪಿಸಿಎಲ್‌ನ ನಿರ್ದೇಶಕ (ಹೆಚ್‌ಆರ್) ಕೆ.ಎಸ್. ಶೆಟ್ಟಿ ಮಾತನಾಡಿ, ಈ ಸಂಶೋಧನಾ ಮತ್ತು ತರಬೇತಿ ಕೇಂದ್ರದಿಂದಾಗಿ ಶಿಕ್ಷಕರನ್ನು ಇನ್ನಷ್ಟು ಮೌಲ್ಯಯುತ ಶಿಕ್ಷಕರನ್ನಾಗಿಸುತ್ತದೆ ಎಂದ ಅವರು ಮೊದಲಿನ ದಿನಗಳಲ್ಲಿ ವಿದ್ಯಾರ್ಥಿಗಳು ಪುಸ್ತಕವನ್ನು ಮಾತ್ರ ನೋಡಿ ಕಲಿಯುತ್ತಿದ್ದರು. ಆದರೆ ಈಗ ಅನೇಕ ರೀತಿಯಲ್ಲಿ ಜ್ಞಾನವನ್ನು ಪಡೆದುಕೊಳ್ಳಬಹುದು, ಆದುದರಿಂದ ಶಿಕ್ಷಕರು ಮುಂಚಿತವಾಗಿಯೇ ಜಾಗೃತೆಯಿಂದ ವಿಷಯದ ಬಗ್ಗೆ ಅಧ್ಯಾಯನ ಮಾಡಿಕೊಂಡು ತರಗತಿಗೆ ತೆರಳಬೇಕಾದ ಅಗತ್ಯವಿದೆ. ಆದುದರಿಂದ ಇಂತಹ ತರಬೇತಿ ಕೇಂದ್ರ ಸಹಕಾರಿಯಾಗಲಿದೆ ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕೆ.ಸಿ. ನಾಕ್ ಮಾತನಾಡಿ, ಹೆಚ್‌ಪಿಸಿಎಲ್ ಎಂಬುದು ಭಾರತದ ಅತಿ ದೊಡ್ಡ ಸಂಸ್ಥೆ ಇಂದು ಈ ಸಂಸ್ಥೆ ನಮ್ಮ ಶಕ್ತಿ ವಿದ್ಯಾ ಸಂಸ್ಥೆಗೆ ದೊಡ್ಡ ಮೊತ್ತವನ್ನು ನೀಡಿ ನಮ್ಮ ಜೊತೆ ಸಹಕರಿಸಿದ್ದಾರೆ. ಸಮಾಜಕ್ಕೆ ಮಕ್ಕಳನ್ನು ತಯಾರು ಮಾಡಿ ದೇಶದ ಸಂಪತ್ತನ್ನಾಗಿಸುವ ಈ ಕಾಯಕವನ್ನು ನಾವು ಮುಂದುವರೆಸುತ್ತಲೆ ಇರುತ್ತೇವೆ. ಹೆಚ್‌ಪಿಸಿಎಲ್‌ನ ನಿರ್ದೇಶಕ ಕೆ.ಎಸ್. ಶೆಟ್ಟಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.


ಶಕ್ತಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾಕ್ ಸ್ವಾಗತಿಸಿ, ಪ್ರಾಸ್ತವಿಕ ನುಡಿಗಳನ್ನಾಡಿದರು.


ಶಕ್ತಿ ವಿದ್ಯಾ ಸಂಸ್ಥೆಯ ಟ್ರಸ್ಟಿ ಸಗುಣ ಸಿ. ನಾಕ್, ಪ್ರಧಾನ ಸಲಹೆಗಾರ ರಮೇಶ್ ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.


ಶಿಕ್ಷಕಿ ಚೇತನ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.












Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article