ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದಭ೯ ಬಿದ್ದಿದ್ದ ಕಸವನ್ನು ರಾತ್ರಿಯೇ ಕ್ಲೀನ್ ಮಾಡಿ ಗಮನ ಸೆಳೆದ ಪೌರಕಾಮಿ೯ಕರು

ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಂದಭ೯ ಬಿದ್ದಿದ್ದ ಕಸವನ್ನು ರಾತ್ರಿಯೇ ಕ್ಲೀನ್ ಮಾಡಿ ಗಮನ ಸೆಳೆದ ಪೌರಕಾಮಿ೯ಕರು


ಮೂಡುಬಿದಿರೆ: ಶುಕ್ರವಾರ ರಾತ್ರಿ ನಡೆದ  ಗಣೇಶೋತ್ಸವದ ವಿಸಜ೯ನಾ ಮೆರವಣೆಗೆಯ ಸಂದಭ೯ ಮಕ್ಕಳು ಮತ್ತು ಹಿರಿಯರು ತಿಂಡಿ ತಿಂದು ರಸ್ತೆಯ ಉದ್ದಕ್ಕೂ ಬಿಸಾಡಿದ್ದ ಕಸವನ್ನು ಮೂಡುಬಿದಿರೆ ಪುರಸಭೆಯ ಪೌರಕಾಮಿ೯ಕರು ರಾತ್ರಿಯೇ ಕ್ಲೀನ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. 


ಮೂಡುಬಿರೆಯಲ್ಲಿ ನಡೆಯುವ ಅತೀ ದೊಡ್ಡ ಸಾವ೯ಜನಿಕ ಹಬ್ಬಗಳಾಗಿರುವ ಮೊಸರು ಕುಡಿಕೆ ಉತ್ಸವ ಮತ್ತು ಗಣೇಶೋತ್ಸವದ ಸಂದಭ೯ದಲ್ಲಿ ಕಾಯ೯ಕ್ರಮ ಮತ್ತು ಶೋಭಾಯಾತ್ರೆಯನ್ನು ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. 


ಈ ಎರಡೂ ಸಂದಭ೯ಗಳಲ್ಲಿಯೂ ದೊಡ್ಡ ಸಂಖ್ಯೆಯಲ್ಲೇ ಅಂಗಡಿಗಳು, ತಿಂಡಿ, ಪಾನೀಯ, ಚರ್ಮುರಿ, ಐಸ್ ಕ್ರೀಮ್ ಹೀಗೆ ನಾನಾ ಬಗೆಯ ಅಂಗಡಿಗಳು ರಸ್ತೆಯುದ್ದಕ್ಕೂ ಇರುತ್ತವೆ.


ಶುಕ್ರವಾರವೂ ವಿವಿಧ ತಿಂಡಿ ತಿನಿಸು, ಜ್ಯೂಸ್, ಐಸ್ ಕ್ರೀಮ್ ನ ವಾಹನಗಳು ಅಲ್ಲಲ್ಲಿ ಇದ್ದವು. ಪುರಸಭೆಯವರು ಕೆಲವೆಡೆ ತಿಂದ ತಿಂಡಿಗಳ ಪ್ಲಾಸ್ಟಿಕ್, ಕಸಗಳನ್ನು ಹಾಕಲು ಬುಟ್ಟಿಯ ವ್ಯವಸ್ಥೆ ಮಾಡಿದ್ದರು. ಆದರೆ ಕೆಲವರು ಖರೀದಿಸಿದ ತಿಂಡಿಯನ್ನು  ರಸ್ತೆಯುದ್ದಕ್ಕೂ ತಿನ್ನುತ್ತಾ ಹೋಗಿ ಕಸವನ್ನು ರಸ್ತೆ ಬದಿಗಳಲ್ಲಿ ಎಸೆದಿದ್ದಾರೆ.

 ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಮುಖ್ಯಾಧಿಕಾರಿ ಇಂದು ಎಂ. ಮತ್ತು ಪರಿಸರ ಅಭಿಯಂತರೆ ಶಿಲ್ಪಾ ಅವರು ಮುದಾಲೋಚನೆ ಮಾಡಿ ಹಬ್ಬಗಳ ಮರುದಿನ ಎಲ್ಲೆಲ್ಲಿಂದಲೋ ಬರುವ ಜನರಿಗೆ ಮೂಡುಬಿದಿರೆಯಲ್ಲಿ ಬಿದ್ದಿರುವ ಕಸವನ್ನು ಕಂಡು ಅಸಹ್ಯ ಆಗಬಾರದೆನ್ನುವ ನಿಟ್ಟಪುರಸಭೆಯು ಪ್ರತಿವಷ೯ವೂ  ಕಸ ವಿಲೇವಾರಿ ಮಾಡಿ ಸ್ವಚ್ಛ ಮೂಡುಬಿದಿರೆಯನ್ನಾಗಿ ಮಾಡಲು  ಪೌರಕಾರ್ಮಿಕರನ್ನು ಮೊದಲೆ ರೆಡಿ ಮಾಡಿದ್ದರು.

ಅದರಂತೆ ಗಣೇಶ ವಿಸರ್ಜನೆ ಮುಗಿದ ಕೂಡಲೇ ಮುಂಜಾವಿನ ವೇಳೆ  ಪೌರಕಾರ್ಮಿಕರು ರಸ್ತೆಬದಿ ಸ್ವಚ್ಛಗೊಳಿಸುವ ಮೂಲಕ ಸಾವ೯ಜನಿಕರ ಗಮನ ಸೆಳೆದಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article